ಮಲೆಯಾಳ-ಐನೆಕಿದು-ಹರಿಹರ ಸಂಪರ್ಕ ರಸ್ತೆಗೆ ಸಚಿವರಿಂದ ಗುದ್ದಲಿ ಪೂಜೆ.
Uncategorized

ಮಲೆಯಾಳ-ಐನೆಕಿದು-ಹರಿಹರ ಸಂಪರ್ಕ ರಸ್ತೆಗೆ ಸಚಿವರಿಂದ ಗುದ್ದಲಿ ಪೂಜೆ.

ಸುಳ್ಯ ವಿಧಾನಸಭಾ ಕ್ಷೇತ್ರದ ಕಡಬ ತಾಲೂಕಿನ ಮಲೆಯಾಳ-ಐನೆಕಿದು-ಹರಿಹರ ಸಂಪರ್ಕ ರಸ್ತೆಗೆ ಸುಮಾರು 1.25 ಕೋಟಿ ರೂಗಳ ಹಾಗೂ ಐನೆಕಿದು - ಕೋಟೆಬಾಗಿಲು - ಕುಡುಮುಂಡೂರು ಸಂಪರ್ಕ ರಸ್ತೆಗೆ 30 ಲಕ್ಷ ಅನುದಾನದ ಗುದ್ದಲಿ ಪೂಜೆಯನ್ನು ಇಂದು ಸಚಿವ ಎಸ್.ಅಂಗಾರರವರು ನೆರವೇರಿಸಿದರು.ಈ ಸಂದರ್ಭದಲ್ಲಿ ಸುಳ್ಯ ಮಂಡಲ ಬಿಜೆಪಿ ಅಧ್ಯಕ್ಷರಾದ ಹರೀಶ್…

ಹೃದಯಾಘಾತಕ್ಕೆ ತುತ್ತಾಗಿ ತನ್ನ ಜೀಪಿನಲ್ಲೇ ಕೊನೆಯುಸಿರೆಳೆದ ಕೊಯಿಲದ ಚಾಲಕ.

ಜೀಪು ಚಲಾಯಿಸಿಕೊಂಡು ಬಂದ ಕೊಯಿಲ ಗ್ರಾಮದ ವ್ಯಕ್ತಿಯೋರ್ವರು ಉಪ್ಪಿನಂಗಡಿಯ ಆಸ್ಪತ್ರೆ ಬಳಿ ಜೀಪು ನಿಲ್ಲಿಸುತ್ತಿದ್ದಂತೆಯೇ ಹೃದಯಸ್ತಂಭನಕ್ಕೆ ತುತ್ತಾದ ಘಟನೆ ವರದಿಯಾಗಿದೆ.ಕಡಬ ತಾಲೂಕು ಕೊಯಿಲ ಗ್ರಾಮದ ಒಳಕಡಮ ನಿವಾಸಿ ವಿಶ್ವನಾಥ ಗೌಡ (50) ಅವರು ಮೃತಪಟ್ಟವರು. ತಮ್ಮ ಜೀಪನ್ನು ದುರಸ್ತಿಗೊಳಪಡಿಸಿ ಹೊಸ ಬಣ್ಣ ಬಳಿದು ಅದರ ವಯರಿಂಗ್‌ ಬದಲಾಯಿಸಲು ಗ್ಯಾರೇಜೊಂದರಲ್ಲಿ…

ಸುಳ್ಯ ಕುಸಿದು ಬಿದ್ದು ಯುವಕ ಸಾವು.
Uncategorized ರಾಜ್ಯ

ಸುಳ್ಯ ಕುಸಿದು ಬಿದ್ದು ಯುವಕ ಸಾವು.

ಸುಳ್ಯ :ಕುಸಿದು ಬಿದ್ದು ಯುವಕನೋರ್ವ ಮೃತಪಟ್ಟ ಘಟನೆ ಸುಳ್ಯ ಕಸಬಾ ಗ್ರಾಮದಿಂದ ವರದಿಯಾಗಿದೆ.ಕುದ್ಪಾಜೆ ಗೋಪಾಲ ಮಣಿಯಾಣಿ ಅವರ ಪುತ್ರ ಅಶೋಕ(41ವ.) ಮೃತಪಟ್ಟ ಯುವಕ.ಮೆಕ್ಯಾನಿಕ್ ಕರ್ತವ್ಯ ನಿರ್ವಹಿಸುತ್ತಿದ್ದ ಇವರು ಡಿ.3 ರಂದು ರಾತ್ರಿ ಮನೆಯೊಳಗೆ ನಡೆದುಕೊಂಡು ಹೋಗುತ್ತಿದ್ದಾಗ ಕುಸಿದು ಬಿದ್ದು ತಲೆಗೆ ಗಾಯವಾಗಿತ್ತು. ತಕ್ಷಣ ಅವರನ್ನು ಸರಕಾರಿ ಆಸ್ಪತ್ರೆಗೆ ಕರೆತಂದರೂ…

ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣ ತನಿಖೆ ಅಧಿಕೃತವಾಗಿ ಎನ್‌ಐಎಗೆ ಹಸ್ತಾಂತರ.

ಮಂಗಳೂರು, ಡಿ01: ಮಂಗಳೂರಿನಲ್ಲಿ ಆಟೋರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದತನಿಖೆಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಎನ್‌ಐಎ ತನಿಖೆಗೆ ಹಸ್ತಾಂತರಿಸಿದೆ.ಮಂಗಳೂರು, ಡಿ01: ಮಂಗಳೂರಿನಲ್ಲಿ ಆಟೋ ರಿಕ್ಷಾದಲ್ಲಿ ನಡೆದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ ತನಿಖೆಯನ್ನು ಕೇಂದ್ರ ಸರ್ಕಾರ ಅಧಿಕೃತವಾಗಿ ಎನ್‌ಐಎ ತನಿಖೆಗೆ ಹಸ್ತಾಂತರಿಸಿದೆ.ಈಗಾಗಲೇ ಪೊಲೀಸರು ತನಿಖೆ ಮುಂದುವರಿಸಿದ್ದು,ಆರೋಪಿ ಶಾರಿಕ್‌ನ…

ಸುಟ್ಟು ಕರಕಲಾದ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ

ಪುತ್ತೂರು: ಮಹಿಳೆಯೋರ್ವರ ಮೃತದೇಹ ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಇಂದು ಪುತ್ತೂರಿನ ಕುಂಬ್ರ ಎಂಬಲ್ಲಿ ನಡೆದಿದೆ.ಸುಟ್ಟು ಕರಕಲಾದ ಸ್ಥಿತಿಯಲ್ಲಿದ್ದ ಮಹಿಳೆ ನಬೀಸ ಎಂದುಗುರುತಿಸಲಾಗಿದೆ.ಈಕೆ ನ.25 ರಂದು ರಾತ್ರಿ ಮನೆಯಲ್ಲಿ ಊಟ ಮುಗಿಸಿ ಮಲಗಿದ್ದು, ಬೆಳಿಗ್ಗೆ ಮನೆಯ ಎದುರು ಭಾಗದಲ್ಲಿ ಇವರು ಸುಟ್ಟು ಕರಕಲಾದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ನಬೀಸ ಅವರು…

ಮಕ್ಕಳು ಮೈದಾನಕ್ಕೆ ಮರಳಿ ಬರಲಿ : ಚೂಂತಾರು
Uncategorized

ಮಕ್ಕಳು ಮೈದಾನಕ್ಕೆ ಮರಳಿ ಬರಲಿ : ಚೂಂತಾರು

ಇತ್ತೀಚಿನ ದಿನಗಳಲ್ಲಿ ಮಕ್ಕಳು ಕಂಪ್ಯೂಟರ್ ನಲ್ಲಿಯೇ ಕ್ರಿಕೆಟ್, ವಾಲಿಬಾಲ್, ಫುಟ್ ಬಾಲ್ ಆಡುತ್ತಿರುವುದು ಕಳವಳಕಾರಿ, ದೈಹಿಕ ಕಸರತ್ತು ವ್ಯಾಯಾಮಕ್ಕೆ ಒತ್ತು ನೀಡುವ ಹೊರಾಂಗಣ ಆಟೋಟಗಳಲ್ಲಿ ಕ್ರೀಡಾ ಚಟುವಟಿಕೆಗಳಲ್ಲಿ ಮಕ್ಕಳು ಹೆಚ್ಚು ಹೆಚ್ಚು ಪಾಲ್ಗೊಳ್ಳಬೇಕು. ಪಠ್ಯದ ಜೊತೆಗೆ ಹೊರಾಂಗಣ ಕ್ರೀಡೆಗೂ ಆದ್ಯತೆ ನೀಡಬೇಕು. ಹಾಗಾದಲ್ಲಿ ಮಾತ್ರ ಮಕ್ಕಳ ಮಾನಸಿಕ ಮತ್ತು…

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಅರ್ಜಿ ಸಲ್ಲಿಕೆ
Uncategorized ರಾಜ್ಯ

ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಅಭ್ಯರ್ಥಿಯಾಗಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಅರ್ಜಿ ಸಲ್ಲಿಕೆ

ಪ್ರತಿಷ್ಠಿತ ಪುತ್ತೂರು ವಿಧಾನಸಭಾ ಕ್ಷೇತ್ರಕ್ಕೆ ಕಾಂಗ್ರೆಸ್ ಅಭ್ಯರ್ಥಿಯಾಗಿ ಆಯ್ಕೆ ಕೋರಿ ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಧನಂಜಯ ಅಡ್ಪಂಗಾಯ ಇಂದು ಕೆಪಿಸಿಸಿ ಕಚೇರಿಯಲ್ಲಿ ಅರ್ಜಿ ಸಲ್ಲಿಸಿದರು. ಧನಂಜಯರು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯರಾಗಿ,ದ ಕ ಜಿಲ್ಲಾ ಕಾಂಗ್ರೆಸ್ ಪ್ರಚಾರ ಸಮಿತಿಯ ಅಧ್ಯಕ್ಷರಾಗಿ, ಹಾಸನ ಮತ್ತು ಚಿಕ್ಕಮಗಳೂರು ಜಿಲ್ಲೆಯ ಕೆಪಿಸಿಸಿ ಸಂಯೋಜಕರಾಗಿ,…

ಪ್ರಿಯದರ್ಶಿನಿ ವನಿತಾ ಪಾರ್ಕ್ ನಲ್ಲಿ ಹಾಡು,ನೃತ್ಯದ ಮೂಲಕ ಸಂಭ್ರಮಿಸಿದ ಮಕ್ಕಳು…
ಮಂಗಳೂರು, ನ.16; ಪ್ರಿಯದರ್ಶಿನಿ ವನಿತಾ ಪಾರ್ಕ್ ನಲ್ಲಿ ಹಾಡು,ನೃತ್ಯದ ಮೂಲಕ ಮಕ್ಕಳು ಸಂಭ್ರಮಿಸಿದರು.ಅವರ ಜೊತೆ ಹಾಡು ನೃತ್ಯದ ಮೂಲಕ ನರೆದ ಹಿರಿಯರು ಸಂಭ್ರಮಿಸುವ ಮೂಲಕ ವಿಶೇಷ ವಾಗಿ ನಡೆಯಿತು.
ಭಾರತೀಯರೆಡ್ ಕ್ರಾಸ್ ಸಂಸ್ಥೆ ದಕ್ಷಿಣ ಕನ್ನಡ ಜಿಲ್ಲಾ ಘಟಕ , ಇನ್ನರ್ ವೀಲ್ ಕ್ಲಬ್ ಮಂಗಳೂರು ನಾರ್ತ್ ,ದೇವಿಕಾ ಯೋಗ ತರಬೇತಿ ಕೇಂದ್ರ ಹಾಗೂ ಪರಿಸರ ಅದ್ಯಯನ ಕೇಂದ್ರ ನೆಲ್ಲಿಗುಡ್ಡೆ ಇದರ ಸಹಭಾಗಿತ್ವದಲ್ಲಿ ನಗರದ ಹ್ಯಾಟ್ ಹಿಲ್ ನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ( ವನಿತಾ ಪಾರ್ಕ್ ) ಆಯೋಜಿ ಸಿದ ಮಕ್ಕಳ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಜಿಲ್ಲಾ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ದಕ್ಷಿಣ ಕನ್ನಡ ಜಿಲ್ಲೆಯ ಅಧಿಕಾರಿ ರಶ್ಮಿ .ಆರ್. ಮಾತನಾಡುತ್ತಾ, ಹೆತ್ತವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣವನ್ನು ನೀಡುವ ಮೂಲಕ ಭವಿಷ್ಯವನ್ನು ರೂಪಿಸಬೇಕು ಮಕ್ಕಳಲ್ಲಿ ಕಲೆ ಸಂಸ್ಕೃತಿಯ ಅಭಿರುಚಿಯನ್ನು ಎಳೆಯ ವಯಸ್ಸಿನಲ್ಲಿಯೇ ಹೆಚ್ಚಿಸಬೇಕು ಎಂದು.ರಶ್ಮಿ .ಆರ್. ಹೇಳಿದರು.
ಧಾರ್ಮಿಕ ದತ್ತಿ ಇಲಾಖೆಯ ಸಹಾಯಕ ಆಯುಕ್ತ ಗುರುಪ್ರಸಾದ್ ಮಾತನಾಡಿ ಅಂಗನವಾಡಿ ಮಕ್ಕಳಿಗೆ ಕಾರ್ಯಕ್ರಮ ಆಯೋಜಿಸುವ ಮೂಲಕ ಇದೊಂದು ಮಾದರಿ ಕಾರ್ಯಕ್ರಮವಾಗಿದೆ. ಇಂತಹ ಕಾರ್ಯಕ್ರಮಗಳು ಎಲ್ಲಾ ಕಡೆಗಳಲ್ಲೂ ನಡೆಯುವ ಮೂಲಕ ಮಕ್ಕಳ ಬೌಧಿಕ ಸಾಮರ್ಥ್ಯವನ್ನು ಹೆಚ್ಚಿಸುವ ಕೆಲಸ ಆಗಬೇಕು ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಮಂಗಳೂರು ಮಹಾನಗರ ಪಾಲಿಕೆ ಸದಸ್ಯೆ ಸಂಧ್ಯಾ ಆಚಾರ್ , ಶ್ರೀ ಅನಘಾ ರಿಫೈನರೀಸ್ ನ ಆಡಳಿತ ನಿರ್ದೇಶಕ ಸಾಂಬಾಶಿವ ರಾವ್ , ಶ್ರೀಮತಿ ಸತ್ಯವಾಣಿ, ಶ್ರೀಮತಿ ಅನ್ನಪೂರ್ಣ, ಇನ್ನರ್ ವೀಲ್ ಕ್ಲಬ್ ನ ಸದಸ್ಯೆ ಡಾ. ಶಾಂತಿ ,ದೇವಿಕಾ ಯೋಗ ತರಬೇತಿ ಕೇಂದ್ರದ ಸಂಚಾಲಕಿ ದೇವಿಕಾ ಪುರುಷೋತ್ತಮ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅದ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ , ಬ್ಯಾಂಕ್ ಆಫ್ ಬರೋಡಾ ಹಿರಿಯ ಪ್ರಬಂಧಕ ಸತೀಶ್ ಪಾಟ್ಕರ್ , ಭಾರತೀಯ ಪತ್ರಕರ್ತರ ಒಕ್ಕೂಟದ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯ ಸದಸ್ಯ ಪಿ.ಬಿ.ಹರೀಶ್ ರೈ , ರಾಜೇಶ್ ದಡ್ಡಂಗಡಿ , ಸಂಧ್ಯಾ ನಾಯಕ್ , ಇಂಡಿಯನ್ ರೆಡ್ ಕ್ರಾಸ್ ಸೊಸೈಟಿಯ ರವೀಂದ್ರನಾಥ ಉಚ್ಚಿಲ್ ಹಾಗೂ ಬಿಜೈ ಕಾಪಿಕಾಡು ಅಂಗನವಾಡಿ ಶಾಲೆಯ ಶಿಕ್ಷಕಿ ನಂದಾ ಉಪಸ್ಥಿತರಿದ್ದರು. ಭಾಸ್ಕರ್ ರೈ ಕಟ್ಟ ಕಾರ್ಯಕ್ರಮ ನಿರೂಪಿಸಿದರು. ಪುಷ್ಪರಾಜ್ ಬಿ.ಎನ್. ವಂದಿಸಿದರು, ಮೈಮ್ ರಾಮದಾಸ್ ಹಾಗೂ ವಿಭಾ ಶ್ರೀನಿವಾಸ್ ನಾಯಕ್ ಮಕ್ಕಳಿಗೆ ವಿವಿಧ ಮನರಂಜನಾ ಕಾರ್ಯಕ್ರಮ ನಡೆಸಿ ಕೊಟ್ಟರು.

ಪುತ್ತೂರು ನಗರ ಸಭೆಯ ಸಾಮಾನ್ಯ ಸಭೆ:

ನಗರ ಸಭೆಯಲ್ಲಿ ಕಡತಗಳ ವಿಲೇವಾರಿ ಪ್ರಕ್ರಿಯೆಯನ್ನು ತೀವ್ರಗೊಳಿಸಲು ಪ್ರತೀ ತಿಂಗಳ ನಾಲ್ಕನೇ ಶುಕ್ರವಾರದಂದು ಕಡತ ವಿಲೇವಾರಿ ಅಭಿಯಾನ ಪ್ರಾರಂಭಿಸಲಾಗುವುದು ನಗರಸಭೆ ಅಧ್ಯಕ್ಷ ಜೀವಂಧರ್ ಜೈನ್ ಸಭೆಯ ಗಮನಕ್ಕೆ ತಂದರು. ನಗರ ಸಭೆಯ ಆಡಳಿತಕ್ಕೊಳಪಟ್ಟ ಕಿಲ್ಲೆ ಮೈದಾನದಲ್ಲಿ ಇನ್ನು ಮುಂದೆ ಕಾರ್ಯಕ್ರಮ ನಡೆಸುವವರು ಸ್ಥಳ ಬಾಡಿಗೆಯ ಜೊತೆಗೆ ಕಾರ್ಯಕ್ರಮದಲ್ಲಿ ಸೇರಿದ…

Онлайн Слоты и Казино Играть желающим Без Регистраци

Онлайн Слоты и Казино Играть желающим Без РегистрацииPin-up Casino Официальный Сайт Играть На подлинные Деньги В Онлайн КазиноContentДоступный Интерфейс Сайта Даже Для подопечныха Выбрать Покер Рум Для Игры на ДеньгиОнлайн Казино🎰 2024 На Деньги –…

error: Content is protected !!
Copyright © 2025 Newsroom First All Rights Reserved.
Owned By & Developed By SANTHOSH NAIR | NIRAALINI