80ನೇ ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿ ಕೆಂಪುಕೋಟೆ ಸಜ್ಜು: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ‘ವಂದೇ ಮಾತರಂ’ ಗಾಯನ!

80ನೇ ಸ್ವಾತಂತ್ರ್ಯ ದಿನಾಚರಣೆಗೆ ದೆಹಲಿ ಕೆಂಪುಕೋಟೆ ಸಜ್ಜು: ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ ‘ವಂದೇ ಮಾತರಂ’ ಗಾಯನ!

​ನವದೆಹಲಿ: ದೇಶಾದ್ಯಂತ 80ನೇ ಸ್ವಾತಂತ್ರ್ಯ ದಿನಾಚರಣೆಯ ಸಂಭ್ರಮ ಕಳೆಗಟ್ಟಿದ್ದು, ದೇಶದ ರಾಜಧಾನಿ ದೆಹಲಿಯ ಐತಿಹಾಸಿಕ ಕೆಂಪುಕೋಟೆಯಲ್ಲಿ ಆಚರಣೆಗೆ ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ. ಆಗಸ್ಟ್ 15ರಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಕೆಂಪುಕೋಟೆಯ ಕೊತ್ತಲದ ಮೇಲೆ ರಾಷ್ಟ್ರಧ್ವಜ ರೋಹಣ ನೆರವೇರಿಸಿ, ದೇಶವನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.​ಈ ಬಾರಿಯ ಸ್ವಾತಂತ್ರ್ಯ ದಿನಾಚರಣೆಯು ಹಲವು ಐತಿಹಾಸಿಕ ಮತ್ತು ವಿಶೇಷ ಅಂಶಗಳಿಗೆ ಸಾಕ್ಷಿಯಾಗುತ್ತಿರುವುದು ವಿಶೇಷ.

ವಿಶೇಷ ಆಕರ್ಷಣೆ: ಪ್ರಥಮ ಬಾರಿಗೆ ‘ವಂದೇ ಮಾತರಂ’ ಗಾಯನ​ರಾಷ್ಟ್ರೀಯ ಗೀತೆ ‘ವಂದೇ ಮಾತರಂ’ ರಚನೆಯಾಗಿ 150 ವರ್ಷಗಳು ಪೂರ್ಣಗೊಳ್ಳುತ್ತಿರುವ ಸಂಭ್ರಮವನ್ನು ಸ್ಮರಿಸುವ ನಿಟ್ಟಿನಲ್ಲಿ, ಈ ಬಾರಿಯ ಕಾರ್ಯಕ್ರಮದಲ್ಲಿ ಪ್ರಥಮ ಬಾರಿಗೆ ಧ್ವಜಾರೋಹಣದ ನಂತರ ‘ವಂದೇ ಮಾತರಂ’ ಗೀತೆಯನ್ನು ಅಧಿಕೃತವಾಗಿ ಪ್ರಸ್ತುತಪಡಿಸಲಾಗುತ್ತಿದೆ. ಪ್ರಧಾನಿಯವರು ಧ್ವಜಾರೋಹಣ ನೆರವೇರಿಸಿದ ತಕ್ಷಣ, ಭಾರತೀಯ ಭೂಸೇನೆಯ ಬ್ಯಾಂಡ್‌ ವಾದ್ಯದೊಂದಿಗೆ ವಂದೇ ಮಾತರಂ ಗೀತೆಯು ಮೊಳಗಲಿದೆ.

ಇದರೊಂದಿಗೆ, ವಾಯುಪಡೆಯ ಎರಡು ಎಂಐ-17 (Mi-17) ಹೆಲಿಕಾಪ್ಟರ್‌ಗಳ ಮೂಲಕ ಪುಷ್ಪವೃಷ್ಟಿ ಕರೆಯಲಾಗುವುದು. ಇದರಲ್ಲಿ ಒಂದು ಹೆಲಿಕಾಪ್ಟರ್ ರಾಷ್ಟ್ರಧ್ವಜವನ್ನು ಮತ್ತು ಇನ್ನೊಂದು ‘ವಂದೇ ಮಾತರಂ’ ಲಾಂಛನವಿರುವ ಧ್ವಜವನ್ನು ಪ್ರದರ್ಶಿಸಲಿದೆ.

​’ಯುವ ಶಕ್ತಿ’ ಮತ್ತು ವಿಕಸಿತ ಭಾರತದ ಸಂಕಲ್ಪ​’ ವಿಕಸಿತ ಭಾರತ 2047’ರತ್ತ ದೇಶ ಸಾಗುತ್ತಿರುವ ಈ ಸಂದರ್ಭದಲ್ಲಿ, ದೇಶದ ‘ಯುವ ಶಕ್ತಿ’ಯ ಕೊಡುಗೆ ಮತ್ತು ಆಶೋತ್ತರಗಳನ್ನು ಗೌರವಿಸುವುದು ಈ ಬಾರಿಯ ಪ್ರಮುಖ ಆಶಯವಾಗಿದೆ. ಜ್ಞಾನಪಥದಲ್ಲಿ ಎನ್‌ಸಿಸಿ (NCC) ಹಾಗೂ ‘ಮೈ ಭಾರತ್’ (My Bharat) ಸ್ವಯಂಸೇವಕರ ಸುಮಾರು 2,500 ಕೆಡೆಟ್‌ಗಳು ಭಾಗವಹಿಸಲಿದ್ದು, ಪ್ರಧಾನಿಯವರ ಭಾಷಣದ ನಂತರ ವಂದೇ ಮಾತರಂ ಹಾಗೂ ರಾಷ್ಟ್ರಗೀತೆಯನ್ನು ಹಾಡಲಿದ್ದಾರೆ.

ರಾಷ್ಟ್ರೀಯ