International Tea Day 2026: ಇಂದು ಅಂತರರಾಷ್ಟ್ರೀಯ ಚಹಾ ದಿನ 2026 ; ಏನಿದರ ವಿಶೇಷತೆ?

International Tea Day 2026: ಇಂದು ಅಂತರರಾಷ್ಟ್ರೀಯ ಚಹಾ ದಿನ 2026 ; ಏನಿದರ ವಿಶೇಷತೆ?

ಜಗತ್ತಿನಾದ್ಯಂತ ಇಂದು ‘ಅಂತರರಾಷ್ಟ್ರೀಯ ಚಹಾ ದಿನ’ವನ್ನು (International Tea Day) ಆಚರಿಸಲಾಗುತ್ತಿದೆ. ಪ್ರತಿದಿನ ಬೆಳಿಗ್ಗೆ ಎದ್ದ ತಕ್ಷಣ ಒಂದು ಕಪ್ ಬಿಸಿಬಿಸಿ ಚಹಾ ಕುಡಿಯದಿದ್ದರೆ ದೈನಂದಿನ ಕೆಲಸಗಳೇ ಆರಂಭವಾಗುವುದಿಲ್ಲ ಎನ್ನುವವರ ಸಂಖ್ಯೆ ಕೋಟಿಗಟ್ಟಲೆ ಇದೆ. ಚಹಾ ಕೇವಲ ಒಂದು ಪೇಯವಲ್ಲ, ಅದೊಂದು ಸಂಸ್ಕೃತಿ ಮತ್ತು ಜೀವನಾಡಿಯಾಗಿದೆ.

ವಿಶ್ವಸಂಸ್ಥೆಯ ಆಹಾರ ಮತ್ತು ಕೃಷಿ ಸಂಸ್ಥೆಯು (FAO) ಈ ದಿನವನ್ನು ಗುರುತಿಸಿದ್ದು, ಚಹಾದ ಸಾಂಸ್ಕೃತಿಕ ಪರಂಪರೆ, ಆರೋಗ್ಯ ಪ್ರಯೋಜನಗಳು ಹಾಗೂ ಆರ್ಥಿಕ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರಲು ಈ ದಿನ ಸೂಕ್ತ ವೇದಿಕೆಯಾಗಿದೆ.

ಈ ವರ್ಷದ ಥೀಮ್ ಏನು? ​ಪ್ರತಿ ವರ್ಷದಂತೆ ಈ ವರ್ಷವೂ ಒಂದು ವಿಶೇಷ ಸಂದೇಶದೊಂದಿಗೆ ಚಹಾ ದಿನವನ್ನು ಆಚರಿಸಲಾಗುತ್ತಿದ್ದು, ಈ ವರ್ಷ “ಚಹಾ ಉಳಿಸಿ, ಸಮುದಾಯಗಳನ್ನು ಬೆಂಬಲಿಸಿ” (Sustaining Tea, Supporting Communities) ಎಂಬ ಧ್ಯೇಯವಾಕ್ಯವನ್ನು ಇಡಲಾಗಿದೆ. ತೋಟದಿಂದ ಹಿಡಿದು ನಾವು ಕುಡಿಯುವ ಕಪ್‌ವರೆಗೂ ಚಹಾ ಉತ್ಪಾದನೆಯನ್ನು ಹೇಗೆ ಪರಿಸರಸ್ನೇಹಿಯಾಗಿ ಹಾಗೂ ಸುಸ್ಥಿರವಾಗಿಡಬಹುದು ಮತ್ತು ಇದರಿಂದ ಚಹಾ ಬೆಳೆಯುವ ಕಾರ್ಮಿಕರ ಹಾಗೂ ಪರಿಸರದ ಹಿತವನ್ನು ಹೇಗೆ ಕಾಯಬಹುದು ಎಂಬುದರ ಬಗ್ಗೆ ಈ ಥೀಮ್ ಒತ್ತು ನೀಡುತ್ತದೆ.

ಅಂತರಾಷ್ಟ್ರೀಯ ಆರೋಗ್ಯ ಮತ್ತು ಸೌಂದರ್ಯ