ಮಂಗಳೂರು: ವೈವಾಹಿಕ ಜಾಲತಾಣಗಳ ಮೂಲಕ ಯುವತಿಯರನ್ನು ನಂಬಿಸಿ, ಮದುವೆಯಾಗುವುದಾಗಿ ನಂಬಿಸಿ ಹಣ ದೋಚುತ್ತಿದ್ದ ಆರೋಪಿಯನ್ನು ಮಂಗಳೂರು ಪೊಲೀಸರು ಬಂಧಿಸಿದ್ದಾರೆ.

ಘಟನೆಯ ವಿವರ:
ಬಂಧಿತ ಆರೋಪಿಯನ್ನು 32 ವರ್ಷದ ಸುಶಾಂತ್ ಪೂಜಾರಿ (ಅಲಿಯಾಸ್ ಸುಶಾಂತ್ ಅಂಕುಶ್ ಪೂಜಾರಿ, ಸುಶಾಂತ್ ಜಿ. ಕರ್ಕೇರಾ) ಎಂದು ಗುರುತಿಸಲಾಗಿದೆ. ಈತ ಆನ್‌ಲೈನ್ ಮ್ಯಾಟ್ರಿಮೋನಿಯಲ್ ಪೋರ್ಟಲ್‌ಗಳನ್ನೇ ತನ್ನ ವಂಚನೆಯ ಜಾಲಕ್ಕೆ ಅಸ್ತ್ರವನ್ನಾಗಿ ಮಾಡಿಕೊಂಡಿದ್ದ.
ನವಿ ಮುಂಬೈನಲ್ಲಿ ನಡೆದಿತ್ತು ವಿವಾಹ
ಪೊಲೀಸರ ಮಾಹಿತಿ ಪ್ರಕಾರ, ಈತ ಇತ್ತೀಚೆಗೆ ಒಬ್ಬ ಯುವತಿಯನ್ನು ಪರಿಚಯ ಮಾಡಿಕೊಂಡು, ಫೆಬ್ರವರಿ 2, 2025 ರಂದು ನವಿ ಮುಂಬೈನಲ್ಲಿ ಆಕೆಯನ್ನು ವಿವಾಹವಾಗಿದ್ದ. ಮದುವೆಯ ನಂತರ ಆಕೆಯಿಂದ ಹಣ ಪಡೆದು ನಾಪತ್ತೆಯಾಗಿದ್ದ ಎನ್ನಲಾಗಿದೆ. ಈ ಬಗ್ಗೆ ದೂರು ದಾಖಲಾದ ಬೆನ್ನಲ್ಲೇ ತನಿಖೆ ನಡೆಸಿದ ಪೊಲೀಸರು ಆರೋಪಿಯನ್ನು ಮಂಗಳೂರಿನಲ್ಲಿ ಸೆರೆಹಿಡಿದಿದ್ದಾರೆ.

