ಕಡಬದ ಕುಂತೂರಿನಲ್ಲಿ ಏಕಾಏಕಿ ಶಾಲಾ ಕಟ್ಟಡ ಕುಸಿತ ನಾಲ್ವರು ಮಕ್ಕಳಿಗೆ ಗಾಯ

ಕಡಬದ ಕುಂತೂರಿನಲ್ಲಿ ಏಕಾಏಕಿ ಶಾಲಾ ಕಟ್ಟಡ ಕುಸಿತ ನಾಲ್ವರು ಮಕ್ಕಳಿಗೆ ಗಾಯ

 ಕಡಬ: ಇಲ್ಲಿನ ಪೆರಾಬೆ ಗ್ರಾ.ಪಂ ವ್ಯಾಪ್ತಿಯ    ಕುಂತೂರು ಸರಕಾರಿ ಹಿ.ಪ್ರಾ.ಶಾಲೆಯಲ್ಲಿ  ಕಾಮಗಾರಿ ವೇಳೆ ಶಾಲಾ ಕಟ್ಟಡ ಕುಸಿತಗೊಂಡು  ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಆ.27ರಂದು ಮಧ್ಯಾಹ್ನದ ವೇಳೆಗೆ ನಡೆದಿದೆ.

ಶಾಲಾ ಕಟ್ಟಡದ ಪಕ್ಕದಲ್ಲೇ ಹಳೆಯ ಕಟ್ಟಡದ  ಬಳಿ  ಜೆಸಿಬಿ ಮೂಲಕ ಕೆಲಸ ಮಾಡಲಾಗುತ್ತಿತ್ತು. ಈ ವೇಳೆ ಹಳೆಯ ಕಟ್ಟಡ ಏಕಾಏಕಿ ಕುಸಿದು ಬಿದ್ದಿದೆ.

ಇದರಿಂದಾಗಿ ನಾಲ್ಕು ಮಕ್ಕಳಿಗೆ ಸಣ್ಣಪುಟ್ಟ ಗಾಯವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ತಿಳಿದು ಬಂದಿದೆ.

ಹೆಚ್ಚಿನ ಮಕ್ಕಳು ಆಟದ ಮೈದಾನಕ್ಕೆ ತೆರಳಿರುವುದರಿಂದ ಭಾರೀ ದುರಂತ ತಪ್ಪಿದೆ .  ಅಧಿಕಾರಿಗಳ ಪರಿಶೀಲನೆ ಬಳಿಕ  ಹೆಚ್ಚಿನ  ಮಾಹಿತಿ ತಿಳಿದು ಬರಲಿದೆ

ರಾಜ್ಯ