ಮಂಗಳೂರು ವಿಮಾನ ನಿಲ್ದಾಣಕ್ಕೆ ಬಾಂಬ್ ಬೆದರಿಕೆ ಆರೋಪಿಗೆ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ ಮಂಗಳೂರು ನ್ಯಾಯಲಯ


ಆರೋಪಿ ಕಾರ್ಕಳ ತಾಲೂಕಿನ ಮುದ್ರಾಡಿ ನಿವಾಸಿ ವಸಂತ ಕೃಷ್ಣ ಶೇರಿಗಾರ ಎಂಬಾತ ಮಂಗಳೂರು ತಾಲೂಕಿನ ಕೆಂಜಾರಿನಲ್ಲಿರುವ ಬಜ್ಪೆ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಿರ್ದೇಶಕರಾಗಿದ್ದ ಮರಪಲ್ಲಿ ರಾಮಯ್ಯ ವಾಸುದೇವ ಎಂಬವರ ಮೊಬೈಲ್ ನಂಬರಗೆ ಆರೋಪಿಯು ಕರೆ ಮಾಡಿ Airport ಲ್ಲಿ ಬಾಂಬ್ ಇದೆ ಎಂದು ಬೆದರಿಕೆ ಕರೆ ನೀಡಿರುವುದಲ್ಲದೇ ಸಂದೇಶ ವನ್ನೂ ಸಹ ಕಳುಹಿಸಿ ಬೆದರಿಕೆ ಹಾಕಿದ ಕುರಿತು ಬಜಪೆ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಆಗಿನ ಪೋಲಿಸ್ ನಿರೀಕ್ಷಕ ಕೆ ಆರ್ ನಾಯಕ್ ಅವರು ತನಿಖೆ ನಡೆಸಿ ಮಾನ್ಯ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಿದ್ದರು.ವಿಚಾರಣೆ ನಡೆಸಿದ ಮಂಗಳೂರಿನ ಆರನೇ ಜೆ.ಎಂ.
ಎಫ್ .ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರೀಮತಿ ಪೂಜಾಶ್ರಿ ಅವರು ಆರೋಪಿಯ ವಿರುದ್ಧ ಹೊರಿಸಿದ ಆರೋಪವೂ ಸಾಬೀತಾಗಿದೆ ಎಂದು ಆರೋಪಿಗೆ ಒಂದು ತಿಂಗಳ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದ್ದಾರೆ. ಸರ್ಕಾರಿ ಅಭಿಯೋಜಕರಾದ ಮೋಹನ್ ಕುಮಾರ್ ಬಿ ಅವರು ಭಾಗಶಃ ಸಾಕ್ಷಿಗಳ ವಿಚಾರಣೆ ನಡೆಸಿದ್ದರು. ನಂತರ ಸಹಾಯಕ ಸರಕಾರಿ ಅಭಿಯೋಜಕ ಜನಾರ್ದನ್ ಅವರು ಸಾಕ್ಷಿಗಳ ವಿಚಾರಣೆ ನಡೆಸಿ ಸರಕಾರದ ಪರವಾಗಿ ವಾದಿಸಿದ್ದಾರೆ

ರಾಜ್ಯ