ಕಲ್ಲುಗುಂಡಿ ಕಾರಿಗೆ ಟೆಂಪೋ ವಾಹನ ಡಿಕ್ಕಿ : ಪ್ರಯಾಣಿಕರಿಗೆ ಗಾಯ: ಆಸ್ಪತ್ರಗೆ ದಾಖಲು

ಕಲ್ಲುಗುಂಡಿ ಕಾರಿಗೆ ಟೆಂಪೋ ವಾಹನ ಡಿಕ್ಕಿ : ಪ್ರಯಾಣಿಕರಿಗೆ ಗಾಯ: ಆಸ್ಪತ್ರಗೆ ದಾಖಲು

ಸುಳ್ಯ : ಕಾರು ಮತ್ತು ಟೆಂಪೋ ವಾಹನದ ನಡುವೆ ಅಪಘಾತ ಸಂಭವಿಸಿ   ಕಾರಿನಲ್ಲಿದ್ದ ಪ್ರಯಾಣಿಕರು  ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ದ‌.ಕ.ಜಿಲ್ಲೆ ಸುಳ್ಯದ ಸಂಪಾಜೆ ಗ್ರಾಮದ ಕಲ್ಲುಗುಂಡಿಯಲ್ಲಿ ಆ.17ರ ರಾತ್ರಿ ಸಂಭವಿಸಿದೆ.

ಮಡಿಕೇರಿ ಕಡೆಯಿಂದ ಸುಳ್ಯಕ್ಕೆ ತೆರಳುತ್ತಿದ್ದ ಲಾರಿ ಹಾಗೂ ಸುಳ್ಯ ಭಾಗದಿಂದ ಮಡಿಕೇರಿ ಕಡೆಗೆ ತೆರಳುತ್ತಿದ್ದ ಕಾರು ಕಲ್ಲುಗುಂಡಿ ಮುಖ್ಯರಸ್ತೆಯಲ್ಲಿ ಪರಸ್ಪರ ಢಿಕ್ಕಿ ಹೊಡೆದಿದ್ದು, ಕಾರಿನಲ್ಲಿದ್ದವರು ಸಣ್ಣಪುಟ್ಟ ಗಾಯಗೊಂಡಿರುವುದಾಗಿ ತಿಳಿದುಬಂದಿದೆ.ಗಾಯಾಳುಗಳನ್ನು ಸ್ಥಳೀಯರು ಸೇರಿ ಸುಳ್ಯ ಆಸ್ಪತ್ರೆಗೆ ಕರೆದೊಯ್ಯಲಾಗಿರುವುದಾಗಿ ತಿಳಿದುಬಂದಿದೆ. ಘಟನೆಯಲ್ಲಿ ಎರಡೂ ವಾಹನಗಳಿಗೆ ಹಾನಿ ಸಂಭವಿಸಿದೆ.

ರಾಜ್ಯ