ಪ್ರೋ ಕಬಡ್ಡಿ ಪಾಟ್ನಾ ಪೈರಟ್ಸ್ ತಂಡದ ಸಹ ತರಬೇತುದಾರನಾಗಿ ಪುತ್ತೂರಿನ  ಪ್ರಶಾಂತ್ ರೈ ಕೈಕಾರ ಆಯ್ಕೆ.

ಪ್ರೋ ಕಬಡ್ಡಿ ಪಾಟ್ನಾ ಪೈರಟ್ಸ್ ತಂಡದ ಸಹ ತರಬೇತುದಾರನಾಗಿ ಪುತ್ತೂರಿನ  ಪ್ರಶಾಂತ್ ರೈ ಕೈಕಾರ ಆಯ್ಕೆ.

ಪುತ್ತೂರು: ಪ್ರೋ‌ ಕಬಡ್ಡಿ ಅಂತರಾಷ್ಟ್ರೀಯ ಮಟ್ಟದಲ್ಲಿ ಗುರುತಿಸಿದ್ದು ಹನ್ನೊಂದನೇ ಆವೃತ್ತಿಗೆ ಕ್ರೀಡಾಭಿಮಾನಿಗಳು ಕಾಯುತ್ತಿದ್ದಾರೆ. ಅದರಂತೆ ಪುತ್ತೂರಿನಿಂದ ಮಂಗಳೂರು ವಿಶ್ವವಿದ್ಯಾನಿಲಯ ಕಬಡ್ಡಿ ಆಟಗಾರನಾಗಿ ವಿಜಯ ಬ್ಯಾಂಕ್ ಉದ್ಯೋಗಿಯಾಗಿ ನಂತರ ಪ್ರೋ ಕಬಡ್ಡಿಗೆ ಆಯ್ಕೆಯಾಗಿದ್ದ ಪುತ್ತೂರಿನ ಪ್ರಶಾಂತ್ ರೈ ಬೇರೆ ಬೇರೆ ‌ತಂಡಗಳಿಗೆ ಆಡಿದ ಅನುಭವಿ ಆಟಗಾರನಾಗಿದ್ದರು ಈ ಬಾರಿ ಅಸಿಸ್ಟೆಂಟ್ ಕೋಚ್ ಆಗಿ ಆಯ್ಕೆಯಾಗಿದ್ದಾರೆ.

ಪ್ರಥಮ ಸೀಸನ್ ನಿಂದ ಒಂಬತ್ತು ಸೀಸನ್ ‌ತನಕ ನಿರಂತರ ಆಡಿದ ಪ್ರಶಾಂತ್ ರೈ, ಒಂದರಿಂದ ಮೂರನೇ ಸೀಸನ್ ತೆಲುಗು ಟೈಟನ್, ನಾಲ್ಕನೇ ಆವೃತ್ತಿ ದಬಾಂಗ್ ದೆಲ್ಲಿ,ಐದನೇ ಹರ್ಯಾಣ ಸ್ಟಿಲ್ಲರ್ಸ್,ಆರು ಯೂಪಿ ಯೋಧ,ಏಳನೇ ಕ್ರಮಾಂಕಕ್ಕೆ ಮತ್ತೆ ಮತ್ತೆ ಹರ್ಯಾಣ ಸ್ಟಿಲರ್ಸ್,ಎಂಟನೇ ಆವತ್ತಿಗೆ ಪಾಟ್ನಾ ಪೈಟರ್ಸ್ ನಾಯಕನಾಗಿ,ಒಂಬತ್ತನೇ ಸೀಸನ್ ನಲ್ಲಿ ಗುಜರಾತ್ ಜೈಟ್ಸ್ ಆಡಿದ ನಂತರ ಪ್ರಸ್ತುತ ಸೀಸನ್ ‌ನಲ್ಲಿ ಅಸಿಸ್ಟೆಂಟ್ ಕೋಚ್ ಆಗಿ ಪಾಟ್ನಾ ಪರವಾಗಿ ತರಬೇತಿ ನೀಡಲಿದ್ದಾರೆ. ಇವರಿಗೆ ಕ್ರೀಡಾ ಕ್ಷೇತ್ರದ ಸಾಧನೆಗೆ ಏಕಲವ್ಯ ಪ್ರಶಸ್ತಿ ಲಭಿಸಿದೆ

ರಾಜ್ಯ