ಮೂಡಬಿದಿರೆ – ಗ್ಯಾಸ್ ಗೀಸರ್ ವಿಷಾನಿಲ ಸೊರಿಕೆಗೆ ಯುವಕ ಬಲಿ

ಮೂಡಬಿದಿರೆ – ಗ್ಯಾಸ್ ಗೀಸರ್ ವಿಷಾನಿಲ ಸೊರಿಕೆಗೆ ಯುವಕ ಬಲಿ

ಮೂಡುಬಿದಿರೆ ಜುಲೈ 29: ಗ್ಯಾಸ್ ಗೀಸರ್ ನಿಂದ ವಿಷಾನಿಲ ಸೋರಿಕೆಯಾಗಿ ಯುವಕನೊಬ್ಬ ಸಾವನಪ್ಪಿದ ಘಟನೆ ಮೂಡಬಿದಿರೆಯ ಕೊಟೆಬಾಗಿಲಿನಲ್ಲಿ ನಡೆದಿದೆ.

ಮೃತ ಯುವಕನನ್ನು ಕೋಟೆಬಾಗಿಲಿನ ಫ್ಲ್ಯಾಟ್ ಒಂದರಲ್ಲಿ ವಾಸವಾಗಿರುವ ಶಾರಿಕ್ (18) ಎಂದು ಗುರುತಿಸಲಾಗಿದೆ.ಶಾರಿಕ್ ಪಿಯುಸಿ ಮುಗಿಸಿ ಪದವಿಗೆ ಮೂಡಬಿದಿರೆಯ ಕಾಲೇಜೊಂದರಲ್ಲಿ ಪ್ರವೇಶಾತಿ ಪಡೆದಿದ್ದರು. ಮನೆಯಲ್ಲಿ ಸ್ನಾನಕ್ಕೆಂದು ಬಾತರೂಮ್ ಗೆ ತೆರಳಿದ್ದ ಅವರು ತುಂಬಾ ಸಮಯವಾದರೂ ಬಾರದ ಕಾರಣ ಬಾಗಿಲು ಒಡೆದು ನೋಡಿದಾಗ ಈ ದುರ್ಘಟನೆ ಬೆಳಕಿಗೆ ಬಂದಿದೆ.ಸಂಪೂರ್ಣ ಮುಚ್ಚಿದ್ದ ಬಾತ್ ರೂಮ್ ನಲ್ಲಿ ಗ್ಯಾಸ್ ಗೀಸರ್ ಬಳಸಿದ್ದರಿಂದ ವಿಷಾನಿಲ ಬಿಡುಗಡೆ ಆಗಿದೆ. ಇದನ್ನು ಆಕಸ್ಮಿಕವಾಗಿ ಸೇವಿಸಿದ್ದರಿಂದ ಶಾರಿಕ್ ಉಸಿರುಗಟ್ಟಿ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ

ರಾಜ್ಯ