ಅಪಾಯ ಮಟ್ಟಕ್ಕೆ  ಹರಿಯುತ್ತಿರುವ ಬಂಟ್ವಾಳದ ನೇತ್ರಾವತಿ ನದಿ | ನೀರಿನ ಮಟ್ಟ ಹೆಚ್ಚಳ

ಅಪಾಯ ಮಟ್ಟಕ್ಕೆ ಹರಿಯುತ್ತಿರುವ ಬಂಟ್ವಾಳದ ನೇತ್ರಾವತಿ ನದಿ | ನೀರಿನ ಮಟ್ಟ ಹೆಚ್ಚಳ

ಬಂಟ್ವಾಳ: ಬಂಟ್ವಾಳದಲ್ಲಿ ನೇತ್ರಾವತಿ ನದಿ ನೀರಿನ ಮಟ್ಟ ಶನಿವಾರ ಬೆಳಗಿನ ಜಾವ ಹೆಚ್ಚಳವಾಗಿದೆ.

ಈ ನದಿಯ ಅಪಾಯದ ಮಟ್ಟ 8.5 ಮೀಟರ್ ಆಗಿದ್ದು, ಸುಮಾರು 8 ಮೀಟರ್ ಎತ್ತರಕ್ಕೆ ಬರುವ ಹೊತ್ತಿಗೆ ನೀರು ಸಮೀಪದ ತಗ್ಗು ಪ್ರದೇಶಗಳಿಗೆ ಹರಿಯಲಾರಂಭಿಸುತ್ತದೆ.

ಈಗಾಗಲೇ ಮುಂಜಾಗರೂಕತಾ ಕ್ರಮ ಕೈಗೊಳ್ಳಲಾಗಿದ್ದು, ನದಿ ಸಮೀಪದ ಭಾಗಗಳಲ್ಲಿ ವಾಸಿಸುವವರು ಹಾಗೂ ಪ್ರತಿ ಬಾರಿಯೂ ನೀರಿನ ಮಟ್ಟ ಏರುವ ಸಂದರ್ಭ ತೊಂದರೆಗೊಳಗಾಗುವವರಿಗೆ ಸೂಚನೆಗಳನ್ನು ನೀಡಲಾಗಿದೆ ಎಂದು ಆಡಳಿತ ತಿಳಿಸಿದೆ.

Uncategorized