ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಲಾರಿ : ಟ್ರಾಫಿಕ್ ಜಾಮ್ : ಗಂಟೆ ಗಟ್ಟಲೆ  ರಸ್ತೆಯಲ್ಲಿ ಬಾಕಿಯಾದ ವಿದ್ಯಾರ್ಥಿಗಳು.

ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಲಾರಿ : ಟ್ರಾಫಿಕ್ ಜಾಮ್ : ಗಂಟೆ ಗಟ್ಟಲೆ  ರಸ್ತೆಯಲ್ಲಿ ಬಾಕಿಯಾದ ವಿದ್ಯಾರ್ಥಿಗಳು.

ಬಂಟ್ವಾಳ: ಲಾರಿಯೊಂದರ ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ನಿಂತ ಘಟನೆ ರಾಷ್ಟ್ರೀಯ ಹೆದ್ದಾರಿ ಮಂಗಳೂರು ಬೆಂಗಳೂರು ರಸ್ತೆಯ ಮೆಲ್ಕಾರ್ ಸಮೀಪದ ನರಹರಿ ಪರ್ವತದ ಬಳಿ ನಡೆದಿದೆ.

ಮಂಗಳೂರಿನಿಂದ ಬೆಂಗಳೂರು ಕಡೆಗೆ ಸಾಮಾಗ್ರಿಗಳನ್ನು ಕೊಂಡು ಹೋಗುತ್ತಿದ್ದ ಲಾರಿಯೊಂದರ ಡಿಸೇಲ್ ಖಾಲಿಯಾಗಿ ರಸ್ತೆಯ ಮಧ್ಯೆ ನಿಂತುಕೊಂಡ ಪರಿಣಾಮವಾಗಿ ಸುಮಾರು ಒಂದು ಗಂಟೆಗೂ ‌ಅಧಿಕ ಹೊತ್ತು ಟ್ರಾಫಿಕ್ ಜಾಮ್ ಸಮಸ್ಯೆ ಉಂಟಾಗಿತ್ತು.

ನರಿಹರಿಯಿಂದ ಸುಮಾರು ಎರಡು ಕಿ.ಮೀ ಅಂದರೆ ಪಾಣೆಮಂಗಳೂರು ವರೆಗೆ ರಸ್ತೆ ಉದ್ದಕ್ಕೆ ಸರತಿ ಸಾಲಿನಲ್ಲಿ ವಾಹನಗಳು ನಿಂತುಕೊಂಡು ದೃಶ್ಯ ಕಂಡು ಬಂತು. ಅ ಕಡೆಗೆ ಕಲ್ಲಡ್ಕ ದ ವರೆಗೂ ವಾಹನಗಳು ಸಾಲು ಕಂಡು ಬಂತು.

ಜೋರಾಗಿ ಸುರಿಯುವ ಮಳೆ ಒಂದೆಡೆಯಾದರೆ ರಸ್ತೆಯ ಗುಂಡಿಗಳಿಂದ ತಪ್ಪಿಸಿಕೊಂಡು ವಾಹನ ಚಾಲನೆ ಮಾಡುವುದು ಸಾಹಸದ ಕೆಲಸವಾದರೆ , ಇಂತಹ ಬೇಜಾವಬ್ದರಿತನದ ಚಾಲಕನ ದೆಸೆಯಿಂದ ಘನಗಾತ್ರದ ಲಾರಿಗಳು ಡಿಸೇಲ್ ಖಾಲಿಯಾಗಿ ರಸ್ತೆ ಮಧ್ಯೆ ಬಾಕಿಯಾಗಿ‌ ಸಾವಿರಾರು ಜನರಿಗೆ ತೊಂದರೆ ನೀಡಿದೆ.

ಸಂಜೆ ವೇಳೆ ಶಾಲೆಕಾಲೇಜಿನಿಂದ ಮನೆಗೆ ತೆರಳುವ ಮಕ್ಕಳಿಗೆ ಸಮಯಕ್ಕೆ ಸರಿಯಾಗಿ ಮನೆಗೆ ತಲುಪಲು ಸಾಧ್ಯವಾಗದೆ ಇಕ್ಕಟ್ಟಿನಲ್ಲಿ ಸಿಲುಕಿದ್ದರು.

ಸಾಲು ಸಾಲಾಗಿ ನಿಂತುಕೊಂಡ ವಾಹನಗಳನ್ನು ತೆರವು ಮಾಡಲು ಟ್ರಾಫಿಕ್ ಪೋಲೀಸರಿಗೆ ಸಾಕಷ್ಟು ಕೆಲಸವಾಗಿತ್ತು

ರಾಜ್ಯ