.

ಕರ್ನಾಟಕ ಸರ್ಕಾರದ ಇಂಧನ ದರ ಏರಿಕೆ ಬೆನ್ನಲ್ಲೇ ಗೋವಾದಲ್ಲಿಯೂ ಇಂಧನ ದರ ಏರಿಕೆ ಮಾಡಿ ಅಲ್ಲಿನ ಬಿಜೆಪಿ ಸರ್ಕಾರ ಆದೇಶ ಹೊರಡಿಸಿದ್ದು, ಶನಿವಾರದಿಂದಲೇ ಪರಿಷ್ಕೃತ ದರ ಜಾರಿಯಾಗಿದೆ.

ಗೋವಾ ಸರ್ಕಾರದ ಅಧೀನ ಕಾರ್ಯದರ್ಶಿ (ಹಣಕಾಸು) ಪ್ರಣಬ್ ಜಿ ಭಟ್ ಅವರು ಶುಕ್ರವಾರ ಪರಿಷ್ಕೃತ ದರ ಅಧಿಸೂಚನೆ ಹೊರಡಿಸಿದ್ದಾರೆ. ಅದರಂತೆ, ಗೋವಾದಲ್ಲಿ ಪೆಟ್ರೋಲ್ ಬೆಲೆ 1 ರೂಪಾಯಿ, ಡೀಸೆಲ್ 36 ಪೈಸೆ ಏರಿಕೆಯಾಗಿದೆ.
ಪೆಟ್ರೋಲ್ ಮತ್ತು ಡೀಸೆಲ್ ಬೆಲೆಯನ್ನು ಕ್ರಮವಾಗಿ 1 ಮತ್ತು 36 ಪೈಸೆಗಳಷ್ಟು ಹೆಚ್ಚಳ ಮಾಡಲಾಗಿದೆ. ಹೊಸ ದರದೊಂದಿಗೆ ಗೋವಾರದಲ್ಲಿ ಪೆಟ್ರೋಲ್ ಬೆಲೆ ಲೀಟರ್ಗೆ 96.40 ರೂ ಆಗಿದ್ದು, ಡೀಸೆಲ್ಗೆ 88.26 ರೂ.ಗೆ ಏರಿಕೆಯಾಗಿದೆ
