ಕೇರಳ ಶೈಲಿಯ ಮನೆಗಳಲ್ಲಿ ಬಳಸುವ ಕೆಂಪು ಕಲ್ಲುಗಳು ಇದೀಗ ಸುಳ್ಯದಲ್ಲಿ ..ನಿಮಗೆ ಬೇಕಾದ ಆಕಾರದಲ್ಲಿ

ಕೇರಳ ಶೈಲಿಯ ಮನೆಗಳಲ್ಲಿ ಬಳಸುವ ಕೆಂಪು ಕಲ್ಲುಗಳು ಇದೀಗ ಸುಳ್ಯದಲ್ಲಿ ..ನಿಮಗೆ ಬೇಕಾದ ಆಕಾರದಲ್ಲಿ

ಜೀವನದಲ್ಲಿ ಸ್ವಂತದ್ದು ಒಂದು ಸೂರು ಇರಬೇಕು ಎನ್ನುವುದ ಪ್ರತಿಯೊಬ್ಭರ ಮನದಾಸೆ, ಎಷ್ಟೊ ವರ್ಷದಿಂದ ಅಷ್ಟೋ ಇಷ್ಟೊ ಕೂಡಿಟ್ಟ ಹಣದಿಂದ ಸುಂದರವಾದ ಮನೆ ಕಟ್ಟಬೇಕು ಎನ್ನುವ ಯೋಚನೆ ಹಲವರದ್ದು, ಇನ್ನು ಕೆಲವರಿಗೆ ತಾವು ಕಟ್ಟೋ ಮನೆ ಬಹಳ ಸುಂದರವಾಗಿರಬೇಕು, ಬೇರೆಯವರಿಗಿಂತ ಬಿನ್ನ, ಹೆಚ್ಚು ಆಕರ್ಷಣೆಯ, ಹೊಸತನ ಹೊಂದಿದ ಮನೆ ತಮ್ಮದಾಗಬೇಕು, ಬಂದವರೆಲ್ಲಾ ತಮ್ಮ ಮನೆಯ ಸೌಂದರ್ಯವನ್ನು ಹೊಗಳಬೇಕು ಎನ್ನುವ ಮಹದಾಸೆ ಹೊಂದಿರುತ್ತಾರೆ, ಈ ರೀತಿ ಹೊಸ ಮನೆಗೆ ರೂಪು ರೇಷೆ ಮಾಡುವವರು ಒಂದೆಡೆಯಾದರೆ, ಈಗಾಗಲೇ ಕಟ್ಟಿರುವ ಮನೆಯನ್ನು ಮತ್ತಷ್ಟು ಆಧುನಿಕರಿಸಿ, ಸುಂದರ ಮನೆಯಾಗಿಸುವ ಆಲೋಚನೆ ಮಾಡುವವರು ನೂರಾರು ಮಂದಿ .

ಈ ಎಲ್ಲಾ ಆಲೋಚನೆಗಳಿಗೆ ಸಹಕಾರಿಯಾಗುವಂತೆ, ಸುಳ್ಯದಲ್ಲಿ ಕೆಂಪು ಕಲ್ಲುಗಳಿ ಹೊಸ ರೂಪ ಕೊಡಬಲ್ಲ ತಂತ್ರಜ್ಞಾನ ಬೆಳಕಿಗೆ ಬಂದಿದೆ, ಸುಳ್ಯ ರಾಜ್ಯ ಹೆದ್ದಾರಿಯ ಬೊಳಬೈಲಿನಲ್ಲಿ ಇಂತಹದೊಂದು ಸಂಸ್ಥೆ ತೆರೆದುಕೊಂಡಿದೆ.
ಸುಳ್ಯ ಶಾಂತಿನಗರದ ಗಿರೀಶ್ ರವರು ನೂತನ ಅವಿಷ್ಕಾರವನ್ನು ಜಿಲ್ಲೆಗೆ ಪರಿಚಯಿಸಿದ್ದಾರೆ.
ಕೆಂಪುಕಲ್ಲನ್ನು ಯಂತ್ರದ ಮೂಲಕ ನವೀನ ರೀತಿಯಲ್ಲಿ ತುಂಡರಿಸಿ ಮನೆಯ ಸಿಟ್ಔಟ್ , ಬಾಲ್ಕನಿ ಗೋಡೆಗಳಿಗೆ ಬಳಸುವುದರಿಂದ ಮತ್ತೆ ಸಿಂಮೆಂಟ್ ಸಾರಣೆ( ಪ್ಲಾಸ್ಟರಿಂಗ್) ಅಗತ್ಯ ಬರುವುದಿಲ್ಲ, ಕಲ್ಲಿನ ಮೇಲೆ ಫಾಲಿಶ್ ಹಾಕುವುದರಿಂದ , ಗೋಡೆಯ ಮೈಲ್ಮೈ ಗಾಜಿನಂತೆ ಹೊಳೆದು ಮನೆಗೆ ಹೊಸತನ ,ಹೊಸ ಮೆರುಗನ್ನು ತರಬಲ್ಲುದಾಗಿದೆ, ಈಗಾಗಲೆ ಕೇರಳ ರಾಜ್ಯದಲ್ಲಿ ಈ ರೀತಿ ಕಲ್ಲುಗಳ ಬಳಕೆ ಕಂಡುಬರುತ್ತಿದ್ದು ಇದೀಗ ಸುಳ್ಯಕ್ಕೆ ಪರಿಚಯಿಸಿದ್ದಾರೆ, ಮನೆ ಮಾತ್ರವಲ್ಲದೆ ದೇವಸ್ಥಾನ , ಕುಟುಂಬದ ದೈವಸ್ಥಾನಕ್ಕೆ ಈ ಕಲ್ಲು ಬಳಸುವುದರಿಂದ ಖರ್ಚು ಕಡಿಮೆಯಾಗುವುದಲ್ಲದೆ, ನೋಡಲು ಆಕರ್ಷಕವಾಗಿ ಕಾಣುತ್ತದೆ, ಇದೇ ಅಲ್ಲದೆ, ಮನೆಯ ತುಳಸಿಕಟ್ಟೆ,ಮನೆಗಳ ಅಂಗಳಕ್ಕೆ ಬಳಸಬಹುದಾಗಿದೆ, ಈ ಕಲ್ಲನ್ನು ಅಂಗಳಕ್ಕೆ ಹಾಕುವುದರಿಂದ ಇಂಟರ್ಲಾಕ್ ಹೋಲಿಸಿದರೆ ಖರ್ಚು ಕಡಿಮೆಯಾಗುವುದು ಮಾತ್ರವಲ್ಲದೆ, ಬೇಸಿಗೆಯ ಯಲ್ಲಿ ಬಿಸಿಲಿನ ತಾಪವನ್ನು ಕಡಿಮೆಯಾಗಿಸುತ್ತದೆ, ಒಟ್ಟಿನಲ್ಲಿ ಈ ಕಲ್ಲು ಬಳಸಿ ಕಟ್ಟುವ ಕಟ್ಟಡದಲ್ಲಿ ಖರ್ಚು ಕಡಿಮೆ ಮಾತ್ರವಲ್ಲ, ನೋಡಲು ಆಕರ್ಷಕ ಮಾತ್ರವಲ್ಲ, ಆರೋಗ್ಯವೂ ಸುದಾರಿಸಬಲ್ಲುದಾಗಿದೆ.
ಈ ರೀತಿಯ ಕಲ್ಲುಗಳನ್ನು ತರಿಸಿ ಕೊಳ್ಳಲು ಅಥವಾ, ಹೆಚ್ಚಿನ ವಿವರ ಪಡೆಯಲು 9481390525. ಸಂಪರ್ಕಿಸ ಬಹುದಾಗಿದೆ.

ರಾಜ್ಯ