SSLC Results2024: ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ನೀವು ನೋಡುವುದು ಹೇಗೆ

SSLC Results2024: ನಾಳೆ ಎಸ್‌ಎಸ್‌ಎಲ್‌ಸಿ ಫಲಿತಾಂಶ ಪ್ರಕಟ, ನೀವು ನೋಡುವುದು ಹೇಗೆ

ಕರ್ನಾಟಕದಲ್ಲಿ ಎರಡು ತಿಂಗಳಲ್ಲಿ ನಡೆದಿದ್ದ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಫಲಿತಾಂಶ ಮೇ 9ರ ಗುರುವಾರ ಪ್ರಕಟವಾಗಲಿದೆ.ಬೆಂಗಳೂರು: ಮಾರ್ಚ್‌ ಏಪ್ರಿಲ್‌ ತಿಂಗಳಲ್ಲಿ ನಡೆದಿದ್ದ 2023-24ನೇ ಎಸ್‌ಎಸ್‌ ಎಲ್‌ ಸಿ ಪರೀಕ್ಷಾ ಫಲಿತಾಂಶವು ಮೇ 9ರಂದು ಪ್ರಕಟವಾಗಲಿದೆ ಎಂದು ಕರ್ನಾಟಕ ಶಾಲಾ ಪರೀಕ್ಷೆಗಳು ಹಾಗೂ ಮೌಲ್ಯಮಾಪನ ಮಂಡಳಿ ಅಧ್ಯಕ್ಷೆ ಎನ್‌.ಮಂಜುಶ್ರೀ ತಿಳಿಸಿದ್ದಾರೆ. ಗುರುವಾರ ಬೆಳಿಗ್ಗೆ 10.30 ಮಂಡಳಿ ಆವರಣದಲ್ಲಿ ಪತ್ರಿಕಾಗೋಷ್ಠಿ ಕರೆಯಲಾಗಿದ್ದು ಅಲ್ಲಿ ವಿವರವನ್ನು ಪ್ರಕಟಿಸಲಾಗುತ್ತದೆ. ಇದಾಗುತ್ತಲೇ 10.30 ಕ್ಕೆ ವೆಬ್‌ಸೈಟ್‌ ಮೂಲಕವು ಫಲಿತಾಂಶವನ್ನು ವೀಕ್ಷಿಸಬಹುದು.

ಕರ್ನಾಟಕದಲ್ಲಿ ಎಸ್ಎಸ್ಎಲ್‌ಸಿ ಪರೀಕ್ಷೆ ಮಾರ್ಚ್ 25 ರಿಂದ ಏಪ್ರಿಲ್ 6 ರವರೆಗೆ ನಡೆಸಲಾಗಿತ್ತು. ಪ್ರಥಮ ಭಾಷೆ ಕನ್ನಡ, ತೆಲುಗು, ಹಿಂದಿ, ಮರಾಠಿ, ತಮಿಳು, ಉರ್ದು, ಇಂಗ್ಲಿಷ್ ಮತ್ತು ಸಂಸ್ಕೃತದೊಂದಿಗೆ ಪರೀಕ್ಷೆ ನಡೆಸಲಾಗಿತ್ತು.

ಈ ಬಾರಿಯ ಎಸ್ಎಸ್‌ಎಲ್‌ಸಿ ಪರೀಕ್ಷೆಗೆ 8.69 ಲಕ್ಷ ವಿದ್ಯಾರ್ಥಿಗಳು ನೋಂದಣಿ ಮಾಡಿಕೊಂಡಿದ್ದರು. ಇದರಲ್ಲಿ 4.41 ಲಕ್ಷ ಬಾಲಕರು, 4.28 ಬಾಲಕಿಯರು ಸೇರಿದ್ದಾರೆ. 18,225 ಖಾಸಗಿ ವಿದ್ಯಾರ್ಥಿಗಳು, 41,375 ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ 5,424 ವಿಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದಾರೆ. ಒಟ್ಟು 2,750 ಪರೀಕ್ಷಾ ಕೇಂದ್ರಗಳಲ್ಲಿ ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದರು.

ಇರಲಿ ಎಚ್ಚರ

ಫಲಿತಾಂಶ ಪರಿಶೀಲನೆ ಹೆಸರಿನಲ್ಲಿ ನಕಲಿ ವೆಬ್‌ಸೈಟ್‌ಗಳು ವಂಚಿಸುವ ಸಾಧ್ಯತೆ ಇರುತ್ತದೆ. ತಮ್ಮಲ್ಲಿ ಎಸ್‌ಎಸ್‌ಎಲ್‌ಸಿ ಫಲಿತಾಂಶಗಳನ್ನು ನೋಡಬಹುದು ಎಂದು ಹೇಳಿ ನಿಮ್ಮ ಮಾಹಿತಿ ಪಡೆದು ವಂಚಿಸುವ ಸಾಧ್ಯತೆಗಳಿರುತ್ತವೆ. ಈ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೆಎಸ್‌ಇಎಬಿ ಅಧಿಕೃತ ವೆಬ್‌ಸೈಟ್‌ನಲ್ಲೇ ಫಲಿತಾಂಶಗಳನ್ನು ವೀಕ್ಷಿಸುವುದು ಉತ್ತಮ.

ವೀಕ್ಷಣೆ ಹೀಗೆ

ಕೆಎಸ್‌ಇಎಬಿ ಅಧಿಕೃತ ವೆಬ್‌ಸೈಟ್‌ kseab.karnataka.gov.in ಗೆ ಭೇಟಿ ನೀಡಿ

ಮುಖಪುಟದಲ್ಲಿ ಕಾಣುವ ಎಸ್ಎಸ್ಎಲ್‌ಸಿ ಫಲಿತಾಂಶ ಲಿಂಕ್ ಮೇಲೆ ಕ್ಲಿಕ್ ಮಾಡಿ

ಲಾಗಿನ್ ಪುಟದಲ್ಲಿ ಕೇಳಲಾದ ಪರೀಕ್ಷಾ ನೋಂದಣಿ ಸಂಖ್ಯೆ ಹಾಗೂ ಹೆಸರು ಕೇಳಲಾದ ಮಾಹಿತಿಯನ್ನು ನಮೂದಿಸಿ

ಹೊಸ ಪುಟದಲ್ಲಿ ನಿಮ್ಮ ಫಲಿತಾಂಶವನ್ನು ಪರಿಶೀಲಿಸಿ

ಡೌನ್ ಲೋಡ್ ಮಾಡಿ ಮತ್ತು ಭವಿಷ್ಯದ ಉಲ್ಲೇಖಕ್ಕಾಗಿ ಪ್ರಿಂಟ್ ಔಟ್ ತೆಗೆದಿಟ್ಟುಕೊಳ್ಳಿ

ಈ ಸೂಚನೆ ಗಮನಿಸಿ

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಮುಖ್ಯ ಅಂಶಗಳು

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಪ್ರಕಟವಾಗಬಹುದಾದ ಸಂಭಾವ್ಯ ದಿನಾಂಕ – ಮೇ9 ರ ನಡುವೆ.

ಕರ್ನಾಟಕ ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಪ್ರಕಟವಾಗಬಹುದಾದ ಸಮಯ- ಹಿಂದಿನ ವರ್ಷಗಳ ಸಮಯದ ಪ್ರಕಾರ ಬೆಳಗ್ಗೆ 10.30ಗಂಟೆ.

ಎಸ್‌ಎಸ್‌ಎಲ್‌ಸಿ ಫಲಿತಾಂಶ 2024 ಪ್ರಕಟವಾಗುವ ಆನ್‌ಲೈನ್ ತಾಣಗಳಿವು – kseab.karnataka.gov.in ಮತ್ತು karresults.nic.in

ರಾಜ್ಯ