ಕೊಕೋ ಧಾರಣೆಯಲ್ಲಿ ದಿಡೀರ್  ಇಳಿಕೆ :325 ರ ಗಡಿ ದಾಟಿದ್ದ ಕೊಕೋ ದಾರಣೆ ಇಂದು 290 ಕ್ಕೆ ಇಳಿಕೆ

ಕೊಕೋ ಧಾರಣೆಯಲ್ಲಿ ದಿಡೀರ್  ಇಳಿಕೆ :325 ರ ಗಡಿ ದಾಟಿದ್ದ ಕೊಕೋ ದಾರಣೆ ಇಂದು 290 ಕ್ಕೆ ಇಳಿಕೆ

 

 60-70 ರೂಪಾಯಿ ಆಸುಪಾಸಿನಲ್ಲಿದ್ದ ಕೊಕೋ ಧಾರಣೆ ಏರಿಕೆಯಲ್ಲಿ ಸಾಗಿ 325 ರೂಪಾಯಿವರೆಗೂ ಹೋಗಿ ಸಾವಿರಾರು ಕೊಕೋ ಬೆಳೆಗಾರರ ಸಂತಸಕ್ಕೆ ಕಾರಣವಾಗಿತ್ತು.ಆದರೆ ಇದೀಗ ಮತ್ತೆ ಕೊಕೊ ದಾರಣೆ ಕುಸಿತ ಕಂಡಿದ್ದು 290 ರೂಪಾಯಿಗೆ ಇಳಿಕೆಯಾಗಿದೆ. 

ಅಡಿಕೆಯ ಜೊತೆಗೆ  ಕರಾವಳಿ , ಮಲೆನಾಡು ಪ್ರದೇಶದಲ್ಲಿ ಕೃಷಿಕರು ಉಪಬೆಳೆಯಾಗಿ ಕೊಕೋ ಬೆಳೆಸುತ್ತಿದ್ದ ರೈತರು , ಅಡಕೆ ಯ ಹಳದಿ ರೋಗ ಮತ್ತು ಎಲೆ ಚುಕ್ಕಿ ರೋಗದಿಂದ ಸಂಕಷ್ಟಕ್ಕೆ ಗುರಿಯಾದಾಗ ಗಟ್ಟಿ ಯಾಗಿ ಕೈ ಹಿಡಿದದ್ದು ಕೊಕೋ ಬೆಳೆ, ಇಲಿ, ಅಳಿಲು ಮಂಗಗಳ ಹಾವಳಿಯ ನಡುವೆ ಕೈಗೆಟಕಿದ ಕೊಕೊ ಮಾರಾಟ ಮಾಡಿ ಕೈತುಂಬಾ ಸಂಪಾದನೆ ಮಾಡಿದ್ದ ರೈತರಿಗೆ ಕೊಂಚ ಶಾಕ್ ನೀಡಿದ್ದು ದಾರಣೆ ಇಳಿದದ್ದು.ಒಣ ಕೊಕೊ ಧಾರಣೆ 900 ರೂಪಾಯಿ ಆಸುಪಾಸಿಗೆ ಬಂದಿತ್ತು ಈಗ ಒಣ ಕೊಕೊ ದಾರಣೆಯು ಕುಸಿತ ಗೊಂಡಿದೆ.

ರಾಜ್ಯ