
ಸಂಪಾಜೆ ಗ್ರಾಮದ ಕಡೆಪಾಲದಲ್ಲಿ ಕಾರೊಂದು ವಿರುದ್ದ ದಿಕ್ಕಿನಲ್ಲಿ ಚಲಿಸಿ ಬೈಕ್‌ಗೆ ಗುದ್ದಿದ ಪರಿಣಾಮ ಬೈಕ್ ಸವಾರನಿಗೆ ಗಂಭೀರ ಗಾಯವಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ನಡೆದಿದೆ .

ಕಾರು ಸುಳ್ಯದ ಕಡೆಯಿಂದ ಹೋಗುತ್ತಿದ್ದು, ಬೈಕ್‌ಗೆ ಗುದ್ದುವ ಮೊದಲು ಇನ್ನೊಂದು ವಾಹನಕ್ಕೂ ಕಾರು ಗುದ್ದಿರುವುದಾಗಿ ವರದಿಯಾಗಿದೆ. ಕಾರು ಕೂಡ ಭಾಗಶಃ ಹಾನಿಗೆ ಒಳಗಾಗಿದೆ.


