ಅನುಮತಿ ಇಲ್ಲದೆ ತಡರಾತ್ರಿವರೆಗೆ ಮ್ಯೂಸಿಕ್ ಹಾಕಿ ಪಾರ್ಟಿ – ಪಾರ್ಟಿಗೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡ ಮಣಿಪಾಲ ಪೊಲೀಸರು

ಅನುಮತಿ ಇಲ್ಲದೆ ತಡರಾತ್ರಿವರೆಗೆ ಮ್ಯೂಸಿಕ್ ಹಾಕಿ ಪಾರ್ಟಿ – ಪಾರ್ಟಿಗೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡ ಮಣಿಪಾಲ ಪೊಲೀಸರು

ಮಣಿಪಾಲ: ಎ.7ರಂದು ಅನುಮತಿ ಇಲ್ಲದೆ ತಡರಾತ್ರಿವರೆಗೆ ಮ್ಯೂಸಿಕ್ ಹಾಕಿ ಪಾರ್ಟಿ ಮಾಡುತ್ತಿದ್ದ ಮಣಿಪಾಲ ಪೆರಂಪಳ್ಳಿ ರಸ್ತೆಯ ಬಳಿಯ ಬಾ‌ರ್ಗೆಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು ಪಾರ್ಟಿಗೆ ಬಳಸಿದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

ಖಚಿತ ಮಾಹಿತಿಯಂತೆ ಪೊಲೀಸರು ದಾಳಿ ನಡೆಸಿದಾಗ ಬಾರ್‌ನಲ್ಲಿ ಡಿಜೆ ಮ್ಯೂಸಿಕ್ ಹಾಕಿ ಪಾರ್ಟಿ ಮಾಡುತ್ತಿರುವುದು ಕಂಡುಬಂದಿದೆ. ಬಾರ್‌ನ ವ್ಯವಸ್ಥಾಪಕ ಮಿಥುನ್ ಕುಮಾರ್ ಮತ್ತು ಮಾಲಕ ದಿನೇಶ್ ಬಿ. ಅಬಕಾರಿ ಇಲಾಖೆಯ ಲೈಸನ್ಸ್ ಷರತ್ತುಗಳನ್ನು ಉಲ್ಲಂಘಿಸಿ ಯಾವುದೇ ಅನುಮತಿ ಇಲ್ಲದೇ ಮ್ಯೂಸಿಕ್ ಹಾಕಿರುವುದಾಗಿ ದೂರಲಾಗಿದೆ. ಅದರಂತೆ ಮ್ಯೂಸಿಕ್‌ಗೆ ಸಂಬಂಧಿಸಿದ ಸೊತ್ತುಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ