ಮಲ್ಪೆ : ಮರಳು ಅಕ್ರಮ ಸಾಗಾಟ ಪತ್ತೆ

ಮಲ್ಪೆ : ಮರಳು ಅಕ್ರಮ ಸಾಗಾಟ ಪತ್ತೆ

ಮಲ್ಪೆ: ಪಡುತೋನ್ಸೆ ಗ್ರಾಮದ ಹೂಡೆ ಜಂಕ್ಷನ್‌ ಬಳಿ ಪಿಕಪ್‌ ವಾಹನದಲ್ಲಿ ಮರಳು ಅಕ್ರಮ ಸಾಗಾಟ ಮಾಡುತ್ತಿದ್ದ ಶಬೀರ್‌ ಸಾಹೇಬ್‌ ಮತ್ತು ಸಾಬೀರ್‌ ಅವರನ್ನು ವಿಚಾರಿಸಿ ವಶಕ್ಕೆ ಪಡೆದು ಪ್ರಕರಣ ದಾಖಲು ಮಾಡಲಾಗಿದೆ.

ಮಲ್ಪೆ ಪೊಲೀಸ್‌ರು ರೌಂಡ್ಸ್‌ನಲ್ಲಿದ್ದಾಗ ಹೂಡೆ ಪೆರ್ಲ ಕಡೆಯಿಂದ ಮುಖ್ಯ ಜಂಕ್ಷನ್‌ ಕಡೆಗೆ ವೇಗವಾಗಿ ಸಾಗುತ್ತಿದ್ದ ವಾಹನವನ್ನು ಗಮನಿಸಿ ತಡೆದು ನಿಲ್ಲಿಸಿದಾಗ ಅಕ್ರಮ ಸಾಗಾಟ ಪತ್ತೆಯಾಗಿದೆ. ಆರೋಪಿಗಳು ಯಾವುದೇ ಪರವಾನಿಗೆ ಇಲ್ಲದೆ ಮರಳನ್ನು ಕಳ್ಳತನಗೈದು ಅಕ್ರಮ ಸಾಗಾಟ ಮಾಡಿ ಮಾರಾಟ ಮಾಡುತ್ತಿದ್ದರು ಎನ್ನುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿದೆ.

ರಾಜ್ಯ