ಬಂಟ್ವಾಳ:  ಬೈಕ್ ಗೆ ರಿಕ್ಷಾ ಡಿಕ್ಕಿ ; ಬೈಕ್ ಸವಾರ ಗಂಭೀರ

ಬಂಟ್ವಾಳ: ಬೈಕ್ ಗೆ ರಿಕ್ಷಾ ಡಿಕ್ಕಿ ; ಬೈಕ್ ಸವಾರ ಗಂಭೀರ

ಬಂಟ್ವಾಳ: ದ್ವಿಚಕ್ರ ವಾಹನಕ್ಕೆ ರಿಕ್ಷಾ ಡಿಕ್ಕಿಯಾಗಿ ದ್ವಿಚಕ್ರ ಸವಾರನೋರ್ವ ಗಂಭೀರ ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಪರಂಗಿಪೇಟೆ ಎಂಬಲ್ಲಿ ನಡೆದಿದೆ.

ಮೂಡಬಿದಿರೆ ನಿವಾಸಿ ಕೌಶಿಕ್ ಗಾಯಗೊಂಡ ವ್ಯಕ್ತಿಯಾಗಿದ್ದಾನೆ.ಪರಂಗಿಪೇಟೆ ಎಂಬಲ್ಲಿ ಏಕಮುಖ ರಸ್ತೆಯಲ್ಲಿ ಬಂದ ರಿಕ್ಷಾ ಚಾಲಕ ಹಮೀದ್ ಬೈಕ್ ಗೆ ಎದುರಿನಿಂದ ಡಿಕ್ಕಿ ಹೊಡೆದಿದ್ದು, ಡಿಕ್ಕಿಯ ರಭಸಕ್ಕೆ ಬೈಕ್ ಸವಾರ ರಸ್ತೆಗೆ ಎಸೆಯಲ್ಪಟ್ಟು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.ಘಟನೆ ಬಗ್ಗೆ ಮೆಲ್ಕಾರ್ ಟ್ರಾಫಿಕ್ ‌ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಾಗಿದೆ.

ರಾಜ್ಯ