
ಸುಳ್ಯ ತಾಲೂಕು ಅಜ್ಜಾವರ ಗ್ರಾಮದ ಮೇನಾಲದಲ್ಲಿ ವಯನಾಟ್ ಕುಲವನ್ ದೈವಂಕಟ್ಟು ಮಹೋತ್ಸವ ಆರಂಭಗೊಂಡಿದೆ.


ಸಂಜೆ ವಿಷ್ಣುಮೂರ್ತಿ ದೈವದ ಭಂಡಾರ ಆಗಮನದ ಬಳಿಕ ಕೋರಚ್ಚನ್ ದೈವದ ವೆಳ್ಳಾಟಂ ಆರಂಭಗೊಂಡಿತು. ಬಳಿಕ ಕಂಡನಾರ್ಕೇಳನ್ ದೈವದ ವೆಳ್ಳಾಟಂ, ರಾತ್ರಿ ವಿಷ್ಣುಮೂರ್ತಿ ದೈವದ ತೊಡಂಗಲ್, ವಯನಾಟ್ ಕುಲವನ್ ದೈವದ ವೆಳ್ಳಾಟಂ ನಡೆಯಲಿದೆ. ಭಕ್ತರು ಸಾವಿರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ.

