ಮೂಲ್ಕಿ : ಎರಡು ಕಾರುಗಳ ನಡುವೆ ಅಪಘಾತ

ಮೂಲ್ಕಿ : ಎರಡು ಕಾರುಗಳ ನಡುವೆ ಅಪಘಾತ

ಮೂಲ್ಕಿ: ಎರಡು ಕಾರುಗಳು ಡಿಕ್ಕಿ ಹೊಡೆದ ಘಟನೆ ಮೂಲ್ಕಿಯ ಪುನರೂರು ಪೆಟ್ರೋಲ್ ಬಂಕ್ ಎದುರು ಹೆದ್ದಾರಿಯಲ್ಲಿ ನಡೆದಿದೆ.ಮಂಗಳೂರು ಕಡೆಯಿಂದ ಬರುತ್ತಿದ್ದ ಕಾರಿಗೆ ಇನ್ನೊಂದು ಕಾರು ಹಿಂಬದಿಯಿಂದ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಘಟನೆಯಿಂದ ಎರಡೂ ಕಾರುಗಳು ಜಖಂಗೊಂಡಿದ್ದು, ಒಂದು ಕಾರು ಡಿವೈಡರ್‌ನ ಮೇಲೆ ಏರಿದೆ. ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ.ಈ ಕುರಿತು ಸಂಚಾರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ರಾಜ್ಯ