ಕಡಬ ಸಮೀಪದ ಗೋಳಿಯಡ್ಕದಲ್ಲಿ ಬೆಂಕಿ ಕೆನ್ನಾಲೆಗೆ ಧಗಧಗೆನೆ ಹೊತ್ತಿ ಉರಿದ ಹಸಿ ಮರ!

ಕಡಬ ಸಮೀಪದ ಗೋಳಿಯಡ್ಕದಲ್ಲಿ ಬೆಂಕಿ ಕೆನ್ನಾಲೆಗೆ ಧಗಧಗೆನೆ ಹೊತ್ತಿ ಉರಿದ ಹಸಿ ಮರ!

ಕಡಬ: ರಸ್ತೆ ಬದಿಯ ಪೊದೆಗಳಿಗೆ ಆಕಸ್ಮಿಕ ಬೆಂಕಿ ತಗುಲಿದ್ದು ಬೆಂಕಿಯ ಕೆನ್ನಾಲೆಗೆ ಹಸಿ ಮರವೊಂದಕ್ಕೆ ಬೆಂಕಿ ಹಬ್ಬಿ ಧಗಧಗೆನೆ ಹೊತ್ತಿ ಉರಿದ ಘಟನೆ ನೂಜಿಬಾಳ್ತಿಲ ಗ್ರಾಮದ ಗೋಳಿಯಡ್ಕ ಎಂಬಲ್ಲಿ ಶುಕ್ರವಾರ ಸಂಜೆ ನಡೆದಿದೆ.

ಬೆಂಕಿ ಬಿದ್ದಿರುವುದನ್ನು ಕಂಡು ವಾಹನ ಸವಾರರು, ಸ್ಥಳೀಯರು ಬೆಂಕಿ ನಂದಿಸಲು ಮುಂದಾಗಿದ್ದಾರೆ. ಆಕಸ್ಮಿಕವಾಗಿ ಬೆಂಕಿ ಹಬ್ಬಲು ನಿಖರ ಕಾರಣ ತಿಳಿದು ಬಂದಿಲ್ಲ.ಸ್ಥಳೀಯರು ಬೆಂಕಿ ನಂದಿಸಲು ಪೈಪ್ ಮೂಲಕ ನೀರು ಹಾಯಿಸಲು ಮುಂದಾಗಿದ್ದಾರೆ. ಸ್ಥಳಕ್ಕೆ ಮೆಸ್ಕಾಂ ಸಿಬ್ಬಂದಿಗಳು ಬಂದಿರುವುದಾಗಿ ಮಾಹಿತಿ ಲಭಿಸಿದೆ.ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.

ರಾಜ್ಯ