ಬಿಗ್ ಬಾಸ್ ಸೀಸನ್ 10’ರ ವಿನ್ನರ್ ಕಾರ್ತಿಕ್.

ಬಿಗ್ ಬಾಸ್ ಸೀಸನ್ 10’ರ ವಿನ್ನರ್ ಕಾರ್ತಿಕ್.

ಬೆಂಗಳೂರು: ಬಿಗ್ ಬಾಸ್ ಸೀಸನ್ 10ರ ವಿನ್ನರ್ ಆಗಿ ಕಾರ್ತಿಕ್ ಮಹೇಶ್ ಅವರು ಹೊರಹೊಮ್ಮಿದ್ದಾರೆ.

ಟಾಪ್‌ ತ್ರಿಯಲ್ಲಿ ಕಾರ್ತಿಕ್‌ ಪ್ರತಾಪ್, ಸಂಗೀತಾ ಶೃಂಗೇರಿ ಇದ್ದರು. ಈ ಇಬ್ಬರಿ ಠಕ್ಕರ್ ಕೊಟ್ಟು ಕಾರ್ತಿಕ್ ಮಹೇಶ್ ಈ ಸೀಸನ್‌ನ ವಿನ್ನರ್ ಆಗಿದ್ದಾರೆ.

ಡ್ಯಾನ್ಸ್, ಮನರಂಜನೆ ಎಲ್ಲದರಲ್ಲೂ ಕಾರ್ತಿಕ್ ಮಹೇಶ್ ಹೈಲೆಟ್ ಆಗಿದ್ದಾರೆ. ಬಿಗ್ ಬಾಸ್ ಕನ್ನಡ 10ರಲ್ಲಿ ಅಭಿಮಾನಿಗಳ ಹೃದಯ ಗೆದ್ದು ವಿನ್ನರ್ ಆಗಿ ಗೆದ್ದು ಬೀಗಿದ್ದಾರೆ.

ಮೂರನೇ ರನ್ನರ್ ಅಪ್ ಆಗಿ ಹೊರಬರೋರಿಗೆ ಬಿಗ್ ಬಾಸ್ ಕಡೆಯಿಂದ 4 ಲಕ್ಷ ರೂಪಾಯಿ ಸಿಗಲಿದೆ. ಎರಡನೇ ರನ್ನರ್ ಅಪ್ ಆಗಿ ಹೊರಬಂದವರಿಗೆ ಪ್ರಾಯೋಜಕರಿಂದ 7 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್, ಎಲೆಕ್ಟ್ರಿಕ್ ಬೈಕ್ ಸಿಗಲಿದೆ. ಮೊದಲನೇ ರನ್ನರ್‌ ಅಪ್‌ಗೆ 10 ಲಕ್ಷ ರೂಪಾಯಿ ಕ್ಯಾಶ್ ಪ್ರೈಸ್ ಸಿಗಲಿದೆ. ಇಷ್ಟೇ ಅಲ್ಲದೆ ಇದರೊಂದಿಗೆ ಎಲೆಕ್ಟ್ರಿಕ್ ಬೈಕ್ ಕೂಡ ಸಿಗಲಿದೆ.

ಬಿಗ್‌ಬಾಸ್ ವಿನ್ನರ್‌ಗೆ ಕಾನ್ಫಿಡೆಂಡ್ ಗ್ರೂಪ್ ಕಡೆಯಿಂದ ಬರೋಬ್ಬರಿ 50 ಲಕ್ಷ ರೂಪಾಯಿ ಹಣ ಬಹುಮಾನ, ಬ್ರಿಜಾ ಕಾರ್‌ ಇನ್ನೂ ಚಿಕ್ಕಪುಟ್ಟ ಬಹುಮಾನಗಳು ಪಡೆದುಕೊಂಡಿದ್ದಾರೆ

ರಾಜ್ಯ