ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಡಿಜಿಟಲ್ ಪ್ರಯೋಗಾಲಯದ ಉದ್ಘಾಟನೆ

ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ಚೊಕ್ಕಾಡಿ ಪ್ರೌಢಶಾಲೆಯಲ್ಲಿ ಡಿಜಿಟಲ್ ಪ್ರಯೋಗಾಲಯದ ಉದ್ಘಾಟನೆ

ಸುಳ್ಯ ಚೊಕ್ಕಾಡಿ ಪ್ರೌಢಶಾಲೆಯ ಸುವರ್ಣ ಮಹೋತ್ಸವದ ಸವಿ ನೆನಪಿಗಾಗಿ ನೂತನ ಪ್ರಯೋಗಾಲಯದ ಉದ್ಘಾಟನೆಯನ್ನು ವಿಧಾನ ಪರಿಷತ್ ಸದಸ್ಯರು ಎಸ್.ಎಲ್ ಭೋಜೇಗೌಡ ರವರು ನೆರವೇರಿಸಿದರು.

ಆಡಳಿತ ಮಂಡಳಿಯ ಅಧ್ಯಕ್ಷ ಮಾಜಿ ಸಚಿವ ಎಸ್.ಅಂಗಾರ ರವರು ಉಪಸ್ಥಿತರಿದ್ದರು.ಬೆಂಗಳೂರಿನ ಕಿವಾನಿ ಇಂಟರ್ನ್ಯಾಷನಲ್ ಕಂಪೆನಿಯ ಉದ್ಯೋಗಿ ರಜನಿಕಾಂತ್ ಉಮ್ಮಡ್ಕ ರವರ ನೇತೃತ್ವದಲ್ಲಿ ಅತ್ಯಾಧುನಿಕತೆಯ ಸ್ಪರ್ಶದೊಂದಿಗೆ ನಿರ್ಮಿಸಿದ ಡಿಜಿಟಲ್ ಲ್ಯಾಬ್ ನ್ನು ಶಾಲೆಗೆ ಕೊಡುಗೆಯಾಗಿ ನೀಡಲಾಯಿತು.

ಈ ಸಂದರ್ಭದಲ್ಲಿ ಕಿವಾನಿ ಸಂಸ್ಥೆಯ ನಿರ್ದೇಶಕ ರಾಜಣ್ಣ ಉಪಸ್ಥಿತರಿದ್ದರು.ಶಾಲೆಯ ಅಭಿವೃದ್ಧಿ ಕಾರ್ಯಕ್ಕೆ ಧನಸಹಾಯ ನೀಡಿದ ಹಲವು ದಾನಿಗಳ ನಾಮ ಫಲಕದ ಅನಾವರಣ ಮಾಡಲಾಯಿತು.

ರಾಜ್ಯ