ಕಡಬ:ಶೌಚಾಲಯದ ಗುಂಡಿ ದಿಢೀರ್ ಕುಸಿದು ಗೊಬ್ಬರ ತುಂಬಿದ್ದ ಲಾರಿ ಏಕಾಏಕಿ ಪಲ್ಟಿ

ಕಡಬ:ಶೌಚಾಲಯದ ಗುಂಡಿ ದಿಢೀರ್ ಕುಸಿದು ಗೊಬ್ಬರ ತುಂಬಿದ್ದ ಲಾರಿ ಏಕಾಏಕಿ ಪಲ್ಟಿ

ಕಡಬ : ಭಾನುವಾರ ಕೋಡಿಂಬಾಳದಲ್ಲಿ ಪಾರ್ಕ್ ಮಾಡಿದ ಸ್ಥಳದಿಂದ ವಾಹನ ಮುಂದಕ್ಕೆ ಚಲಾಯಿಸುವಾಗ ಶೌಚಾಲಯದ ಗುಂಡಿಗೆ ಚಕ್ರ ಸಿಲುಕಿ ಕುಸಿದು ಗೊಬ್ಬರ ತುಂಬಿದ ಲಾರಿ ಪಲ್ಟಿಯಾದ ಘಟನೆ ನಡೆದಿದೆ.

ಮಡಿಕೇರಿಯಿಂದ ಕೋಳಿ ಗೊಬ್ಬರ ತುಂಬಿಸಿಕೊಂಡು ಬಂದಿದ್ದ ಲಾರಿ ಕೊಡಿಂಬಾಳ ಅಯ್ಯಪ್ಪ ಮಂದಿರದ ಮುಂಭಾಗದ ಮೈದಾನದಲ್ಲಿ ಪಾರ್ಕಿಂಗ್ ಮಾಡಿ ಚಾಲಕ ಅದರಲ್ಲೇ ನಿದ್ರೆ ಮಾಡಿದ್ದರು.ಶನಿವಾರ ಮುಂಜಾನೆ ಲಾರಿಯನ್ನು ಚಲಾಯಿಸುವ ವೇಳೆ ಮೈದಾನದಲ್ಲಿದ್ದ ಶೌಚಾಲಯದ ಗುಂಡಿ ಕುಸಿದು ವಾಹನ ಪಲ್ಟಿಯಾಗಿದೆ.

ಘಟನೆಯಲ್ಲಿ ಲಾರಿಯಲ್ಲಿ ಚಾಲಕನ ಜೊತೆ ಇದ್ದ ಇಬ್ಬರು ಸ್ಥಳೀಯರಿಗೆ ಗಾಯಗಳಾಗಿದ್ದು, ಒಬ್ಬರ ಕುತ್ತಿಗೆ, ಕಿವಿ ಹಾಗೂ ಇನ್ನೊರ್ವನ ಮುಖಕ್ಕೆ ಗಾಯವಾಗಿದೆ ಎಂದು ತಿಳಿದುಬಂದಿದೆ.

ರಾಜ್ಯ