
ಉಡುಪಿ: ಜ.4ರಂದು ಮಲ್ಪೆಯಲ್ಲಿ ಕೆಂಡಸೇವೆ ವೇಳೆ ಅಯ್ಯಪ್ಪ ಮಾಲಾಧಾರಿಯೊಬ್ಬರು ಬೆಂಕಿ ಮೇಲೆ ನಡೆಯಲು ಹೋಗಿ ಆಯತಪ್ಪಿ ಬೆಂಕಿಯ ಮೇಲೆ ಬಿದ್ದ ಘಟನೆ ನಡೆದಿದೆ.

ಮಲ್ಪೆಯ ಅಯ್ಯಪ್ಪ ಮಂದಿರದ ವಾರ್ಷಿಕೋತ್ಸವ ವೇಳೆ ಅವಘಡ ನಡೆದಿದ್ದು ಕೆಂಡ ಹಾಯುವ ವೇಳೆ ಆಯ ತಪ್ಪಿ ಮಾಲಾಧಾರಿ ವ್ಯಕ್ತಿ ಬೆಂಕಿಗೆ ಬಿದ್ದಿದ್ದಾರೆ. ಸ್ಥಳೀಯರ ಮೊಬೈಲ್ ನಲ್ಲಿ ವಿಡಿಯೋ ಸೆರೆಯಾಗಿದ್ದು ಆಯತಪ್ಪಿ ಬೀಳುತ್ತಿದ್ದಂತೆ ಜನ ಹೌಹಾರಿದ್ದಾರೆ. ಕೂಡಲೇ ಇತರೇ ಮಾಲಾಧಾರಿಗಳು ಆ ವ್ಯಕ್ತಿಯನ್ನು ಎತ್ತಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
