ಪತಿ ಸಾವಿಗೀಡಾದ ಕೆಲವೇ ದಿನದಲ್ಲಿ ಮಹಿಳೆ ಆತ್ಮಹತ್ಯೆ:ತವರು ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ ದಾದಿ.

ಪತಿ ಸಾವಿಗೀಡಾದ ಕೆಲವೇ ದಿನದಲ್ಲಿ ಮಹಿಳೆ ಆತ್ಮಹತ್ಯೆ:ತವರು ಮನೆಯಲ್ಲೇ ನೇಣಿಗೆ ಕೊರಳೊಡ್ಡಿದ ದಾದಿ.

ಪತಿ ಅಗಲಿದ ಕೆಲವೇ ದಿನದಲ್ಲಿ ನರ್ಸ್ ಒಬ್ಬರು ತಮ್ಮ ತವರು ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೆ.೪ ರ ರಾತ್ರಿ ಪೆರಾಜೆಯಿಂದ ವರದಿಯಾಗಿದೆ, ಪುತ್ತೂರು ಚೇತನಾ ಆಸ್ಪತ್ರೆಯಲ್ಲಿ ನರ್ಸ್ ಆಗಿದ್ದ ರೂಪಾ( 29 ವರ್ಷ) ಆತ್ಮಹತ್ಯೆ ಮಾಡಿಕೊಂಡವರು.

ರೂಪ ಅವರನ್ನು ಎರಡು ವರ್ಷಗಳ ಹಿಂದೆಯಷ್ಟೆ ಸವಣೂರು ಪೆರಿಯಡ್ಕಕ್ಕೆ ಕಡೆಗೆ ವಿವಾಹ ಮಾಡಲಾಗಿತ್ತು, ಈಕೆಯ ಪತಿ ಕಳೆದ ಹದಿನೈದು ದಿನಗಳ ಹಿಂದೆ ಹೃದಯಾಘಾತದಿಂದ ನಿಧನರಾಗಿದ್ದರು ಇದಾದ ಬಳಿಕ ರೂಪಾ ತವರು ಮನೆ ಪೆರಾಜೆಗೆ ಬಂದಿದ್ದರು. ಸೋಮವಾರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಚೂಡಿದಾರ ಶಾಲು ಬಳಸಿ ನೇಣಿಗೆ ಶರಣಾಗಿದ್ದಾರೆ ಎಂದು ಹೇಳಲಾಗಿದೆ.ಸಂಪಾಜೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ರಾಜ್ಯ