ಮಾಣಿ: ಭಾರೀ ಗಾಳಿ ಮಳೆ ಮಾರುತಿ ವ್ಯಾನ್ ಮೇಲೆ ಬಿದ್ದ ಮರ: ನಜ್ಜುಗುಜ್ಜಾದ ವ್ಯಾನ್

ಮಾಣಿ: ಭಾರೀ ಗಾಳಿ ಮಳೆ ಮಾರುತಿ ವ್ಯಾನ್ ಮೇಲೆ ಬಿದ್ದ ಮರ: ನಜ್ಜುಗುಜ್ಜಾದ ವ್ಯಾನ್

ಭಾರೀ ಮಳೆ ಗಾಳಿಗೆ ಮನೆ ಮುಂಭಾಗ ನಿಲ್ಲಿಸಿದ್ದ ಓಮ್ನಿ ಕಾರಿನ ಮೇಲೆ ಮರ ಬಿದ್ದ ಪರಿಣಾಮ ಮಾರುತಿ ವ್ಯಾನ್ ಸಂಪೂರ್ಣವಾಗಿ ಜಖಂಗೊಂಡ ಘಟನೆ ಮಾಣಿ-ಮೈಸೂರು ರಾಜ್ಯ ಹೆದ್ದಾರಿ ಕೊಡಾಜೆ ಎಂಬಲ್ಲಿ ನಡೆದಿದೆ.‌

ಕೊಡಾಜೆ ನಿವಾಸಿ ಇಸ್ಮಾಯಿಲ್ ಎಂಬವರು ತಮ್ಮ ಸೇರಿದ ಓಮ್ನಿ ಕಾರನ್ನು ತನ್ನ ಮನೆಯ ಸಮೀಪ ನಿಲ್ಲಿಸಿದ್ದರು. ಮಳೆ ಗಾಳಿಗೆ ಬೃಹತಾಕಾರದ ಮರ ಅದರ ಮೇಲೆ ಉರುಳಿ ಬಿದ್ದಿದೆ.‌ ಇದರಿಂದ ಕಾರು ಸಂಪೂರ್ಣವಾಗಿ ಜಖಂಗೊಂಡಿದೆ ಎಂದು ತಿಳಿದು ಬಂದಿದೆ.

ರಾಜ್ಯ