ವಾಹನ ಮಾಲೀಕರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ!

ವಾಹನ ಮಾಲೀಕರಿಗೆ ಶಾಕ್ ನೀಡಿದ ರಾಜ್ಯ ಸರ್ಕಾರ!

​ಬೆಂಗಳೂರು:ಕರ್ನಾಟಕ ಸರ್ಕಾರವು ರಾಜ್ಯದ ವಾಹನ ಮಾಲೀಕರಿಗೆ ಶಾಕ್ ನೀಡಿದ್ದು, ಹೊಗೆ ತಪಾಸಣೆ ಪ್ರಮಾಣಪತ್ರ (PUC Certificate) ಪಡೆಯಲು ನಿಗದಿಪಡಿಸಲಾಗಿದ್ದ ಶುಲ್ಕವನ್ನು ಹೆಚ್ಚಿಸಿ ಆದೇಶ ಹೊರಡಿಸಿದೆ. ರಾಜ್ಯಾದ್ಯಂತ ಇರುವ ಅಧಿಕೃತ ಮಾಲಿನ್ಯ ತಪಾಸಣಾ ಕೇಂದ್ರಗಳಲ್ಲಿ (Authorized PUC Testing Centres) ಈ ಪರಿಷ್ಕೃತ ದರಗಳು ತಕ್ಷಣದಿಂದಲೇ ಜಾರಿಗೆ ಬರಲಿವೆ.

ಸಾರಿಗೆ ಇಲಾಖೆಯ ಮಾಹಿತಿಯಂತೆ, ತಪಾಸಣಾ ಕೇಂದ್ರಗಳ ನಿರ್ವಹಣಾ ವೆಚ್ಚ ಹೆಚ್ಚಾಗಿರುವುದು ಹಾಗೂ ಹೊಸ ತಂತ್ರಜ್ಞಾನದ ಉಪಕರಣಗಳ ಬಳಕೆಯನ್ನು ಉತ್ತೇಜಿಸುವ ಉದ್ದೇಶದಿಂದ ಈ ದರ ಪರಿಷ್ಕರಣೆ ಮಾಡಲಾಗಿದೆ.

ಪರಿಷ್ಕೃತ PUC ಶುಲ್ಕಗಳ ವಿವರ:​ ವಿವಿಧ ನಮೂನೆಯ ವಾಹನಗಳಿಗೆ ಪರಿಷ್ಕರಿಸಲಾದ ನೂತನ ತಪಾಸಣಾ ಶುಲ್ಕದ ವಿವರ ಹೀಗಿದೆ: ದ್ವಿಚಕ್ರ ವಾಹನಗಳು ₹65 ರಿಂದ ₹80, ಆಟೋ ರಿಕ್ಷಾ ₹75 ರಿಂದ ₹80, ಪೆಟ್ರೋಲ್, ಎಲ್‌ಪಿಜಿ, ಸಿಎನ್‌ಜಿ ಕಾರುಗಳು₹115 ರಿಂದ ₹150, ಡೀಸೆಲ್ ವಾಹನಗಳು ₹160 ರಿಂದ ₹200.

ನಿಯಮ ಉಲ್ಲಂಘಿಸಿದರೆ ಭಾರಿ ದಂಡ: ಮೋಟಾರು ವಾಹನ ಕಾಯ್ದೆಯಡಿ ಪ್ರತಿಯೊಂದು ವಾಹನಕ್ಕೂ ಸಿಂಧುವಾಗಿರುವ PUC ಪ್ರಮಾಣಪತ್ರ ಹೊಂದುವುದು ಕಡ್ಡಾಯವಾಗಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ಸಂಚಾರ ಪೊಲೀಸರು ಹಾಗೂ ಸಾರಿಗೆ ಅಧಿಕಾರಿಗಳು ತಪಾಸಣೆ ಚುರುಕುಗೊಳಿಸಿದ್ದು, ಮಾನ್ಯತೆ ಇರುವ PUC ಪ್ರಮಾಣಪತ್ರ ಹೊಂದಿಲ್ಲದಿದ್ದರೆ ಭಾರೀ ದಂಡ ತೆರಬೇಕಾಗುತ್ತದೆ.

​ಆದ್ದರಿಂದ ವಾಹನ ಸವಾರರು ತಮ್ಮ ವಾಹನಗಳ ಮಾಲಿನ್ಯ ತಪಾಸಣೆಯ ಅವಧಿ ಮುಗಿಯುವ ಮುನ್ನವೇ ಅಧಿಕೃತ ಕೇಂದ್ರಗಳಿಗೆ ತೆರಳಿ ನೂತನ ದರವನ್ನು ಪಾವತಿಸಿ ಪ್ರಮಾಣಪತ್ರ ನವೀಕರಿಸಿಕೊಳ್ಳಲು ಸೂಚಿಸಲಾಗಿದೆ.

ರಾಜ್ಯ ವಾಹನ ಸುದ್ದಿ