
ದೆಹಲಿ: 11 ಡಿಸೆಂಬರ್ 2024 ರಂದು ಶ್ರೀಯುತ ಶಕ್ತಿಕಾಂತ್ ದಾಸ್ ಅವರು ಗವರ್ನರ್ ಹುದ್ದೆಯಿಂದ ನಿವೃತ್ತರಾದ ಹಿನ್ನೆಲೆ, ಆರ್‌ಬಿಐ ನ ನೂತನ ಗವರ್ನರ್ ಅನ್ನು ಆಯ್ಕೆ ಮಾಡಲಾಗಿದ್ದು, ಶ್ರೀಯುತ ಸಂಜಯ್ ಮಲ್ಹೋತ್ರಾ ಅವರು ನೂತನ ಗವರ್ನರ್ ಆಗಿ ಆಯ್ಕೆಯಾಗಿದ್ದಾರೆ. ಅವರು ಆರ್‌ಬಿಐನಲ್ಲಿ ಸೇವೆ ಸಲ್ಲಿಸುತ್ತಿರುವ 26ನೇ ಗವರ್ನರ್. ಅವರು 12 ಡಿಸೆಂಬರ್ 2024ರಂದು ಸೇವೆಯನ್ನು ಸಲ್ಲಿಸುವುದಕ್ಕೆ ಪ್ರಾರಂಭಿಸಿರುತ್ತಾರೆ.
ಮಲ್ಹೋತ್ರಾ ಅವರು ಮೂಲತಃ ರಾಜಸ್ಥಾನದವರಾಗಿದ್ದು, 1990 ರ ಬ್ಯಾಚ್ ರಾಜಸ್ಥಾನ ಕ್ಯಾಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಕಾನ್‌ಪುರದ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿಯಿಂದ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಬಿಟೆಕ್ ಪದವಿ ಪಡೆದಿದ್ದು, ಅಮೇರಿಕಾದ ಪ್ರಿನ್ಸ್‌ಟನ್ ವಿಶ್ವವಿದ್ಯಾಲಯದಿಂದ ಪಬ್ಲಿಕ್ ಪಾಲಿಸಿಯಲ್ಲಿ ಮಾಸ್ಟರ್ ಡಿಗ್ರಿ ಪಡೆದಿರುತ್ತಾರೆ.
ಐಎಎಸ್ ಅಧಿಕಾರಿಯಾಗಿ ಮಲ್ಹೋತ್ರಾ ಅವರು ಕಳೆದ 33 ವರ್ಷಗಳಿಂದ ಭಾರತ ಸರಕಾರ ಅನೇಕ ವಿಭಾಗಗಳಲ್ಲಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದು, ತಮ್ಮ ಪರಿಶ್ರಮ ಮತ್ತು ದಕ್ಷತೆಗೆ ಹೆಸರುವಾಸಿಯಾಗಿದ್ದಾರೆ. ಅವರಿಗೆ ತೆರಿಗೆ, ಮಾಹಿತಿ ತಂತ್ರಜ್ಞಾನ, ಗಣಿಗಾರಿಕೆ ಹೀಗೆ ಅನೇಕ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ ಅನುಭವವಿದೆ.
