ಅನಂತಪದ್ಮನಾಭಸ್ವಾಮಿ ಕ್ಷೇತ್ರದ ಕೆರೆಯಲ್ಲಿ ಮೊಸಳೆ ಪತ್ತೆ : ‘ಬಬಿಯಾ’ ಅಗಲಿ ಒಂದೇ ವರ್ಷಕ್ಕೆ ಪವಾಡ

ಅನಂತಪದ್ಮನಾಭಸ್ವಾಮಿ ಕ್ಷೇತ್ರದ ಕೆರೆಯಲ್ಲಿ ಮೊಸಳೆ ಪತ್ತೆ : ‘ಬಬಿಯಾ’ ಅಗಲಿ ಒಂದೇ ವರ್ಷಕ್ಕೆ ಪವಾಡ

ಕಾಸರಗೋಡು: ಕಾಸರಗೋಡು ಜಿಲ್ಲೆಯ ಅನಂತಪುರದ ಅನಂತಪದ್ಮನಾಭಸ್ವಾಮಿ ದೇವಸ್ಥಾನದಲ್ಲಿ ಬಬಿಯಾ ಮೊಸಳೆ ಸಾವನ್ನಪ್ಪಿದ ಒಂದು ವರ್ಷ ಒಂದು ತಿಂಗಳ ಬಳಿಕ ಮತ್ತೊಂದು ಮೊಸಳೆ ಪ್ರತ್ಯಕ್ಷಗೊಂಡಿದೆ.
ಶತಮಾನಗಳಿಂದ ದೇವಾಲಯದ ಕೊಳದಲ್ಲಿ ಮೊಸಳೆಯೊಂದು ಸಾರ್ವಜನಿಕರಿಗೆ ಕಾಣಿಸಿಕೊಳ್ಳುತ್ತಿತ್ತು. “ಬಬಿಯಾ’ ಎಂಬ ಹೆಸರಿನಿಂದ ಅದನ್ನು ಕರೆಯುತ್ತಿದ್ದರು. ಬ್ರಿಟಿಷರ ಆಡಳಿತವಿದ್ದಾಗ ಅಧಿಕಾರಿಯೊಬ್ಬ ಅದನ್ನು ಗುಂಡಿಟ್ಟು ಕೊಂದಿದ್ದ. ಬಳಿಕ ಎರಡನೇ “ಬಬಿಯಾ’ ಕಾಣಿಸಿಕೊಂಡಿತ್ತು. ಕ್ಷೇತ್ರದಲ್ಲಿ ಮಧ್ಯಾಹ್ನ ಪೂಜೆಯ ಬಳಿಕ ಪುರೋಹಿತರು ಅನ್ನ ನೈವೇದ್ಯದೊಂದಿಗೆ ಕೆರೆ ಬಳಿ ತೆರಳಿ ಕರೆದಾಗ ಗುಹೆಯಿಂದ ಹೊರಬಂದು ನೈವೇದ್ಯವನ್ನು ಸ್ವಿಕರಿಸಿ ಗುಹೆಗೆ ಮರಳುತ್ತಿತ್ತು. 75 ವರ್ಷಗಳ ಕಾಲ ಪೂಜಿಸಲ್ಪಟ್ಟ 2ನೇ ಬಬಿಯಾ 2022ರ ಅಕ್ಟೋಬರ್‌ 9ರಂದು ವೃದ್ಧಾಪ್ಯದ ಕಾರಣ ಅಸುನೀಗಿತ್ತು. ಒಂದು ವರ್ಷದ ಬಳಿಕ ಅಗಲಿದ ಮೊಸಳೆಯ ಸಂಸ್ಮರಣೆ ಕಾರ್ಯಕ್ರಮವನ್ನೂ ಮಾಡಲಾಗಿತ್ತು.

ರಾಜ್ಯ