ಸುಳ್ಯದ ಜ್ಯೋತಿ ಸರ್ಕಲ್ ಬಳಿ ಎರಡು ಕಾರುಗಳಿಗೆ ಗುದ್ದಿದ ಜೀಪ್ : ವಾಹನಗಳು ಜಖಂ

ಸುಳ್ಯದ ಜ್ಯೋತಿ ಸರ್ಕಲ್ ಬಳಿ ಎರಡು ಕಾರುಗಳಿಗೆ ಗುದ್ದಿದ ಜೀಪ್ : ವಾಹನಗಳು ಜಖಂ

ಸಾಂದರ್ಭಿಕ ಚಿತ್ರ

ಸುಳ್ಯದ ಜ್ಯೋತಿ ಸರ್ಕಲ್ ಬಳಿ ಅ‌ ೨ ರ ಸಂಜೆ ಜೀಪೊಂದು ಎರಡು ಕಾರುಗಳಿಗೆ ಗುದ್ದಿ ವಾಹನಗಳು ಜಖಂಗೊಂಡ ಘಟನೆ ವರದಿಯಾಗಿದೆ.

ಇನ್ನೋವಾ ಕಾರು ಮತ್ತು ರೆನಾಲ್ಟ್ ಕಾರಿಗೆ, ಥಾರ್ ಜೀಪು ಡಿಕ್ಕಿ ಹೊಡೆದಿದೆ . ಪುತ್ತೂರಿನ ಕಡೆಯಿಂದ ಎರಡು ಕಾರುಗಳು ಬರುತ್ತಿದ್ದಾಗ ಎದುರುಭಾಗದಿಂದ ಬಂದ ಥಾರ್ ಜೀಪ್ ನಡುವೆ ಅಪಘಾತ ಸಂಭವಿಸಿದೆ. ಘಟನೆಯಲ್ಲಿ ಪ್ರಯಾಣಿಕರೆಲ್ಲರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ, ವಾಹನಗಳು ಜಖಂಗೊಂಡಿದ್ದು ಅಪಘಾತದಿಂದಾಗಿ ಸ್ವಲ್ಪ ಹೊತ್ತು ಟ್ರಾಫಿಕ್ ಜಾಮ್ ಉಂಟಾಗಿ ಸಾರ್ವಜನಿಕರು ಪರದಾಡುವಂತಾಯಿತು.ಇದೀಗ ಮೂರೂ ವಾಹನಗಳನ್ನು ಠಾಣೆಗೆ ಒಯ್ಯಲಾಗಿದೆ.

ರಾಜ್ಯ