ರಕ್ತ ಚಂದನ ಸಾಗಾಟ: ಮೂವರು ಪೊಲೀಸ್ ವಶ.

ರಕ್ತ ಚಂದನ ಸಾಗಾಟ: ಮೂವರು ಪೊಲೀಸ್ ವಶ.

ಮಡಿಕೇರಿ ಜೂ.29 : ತಮಿಳುನಾಡಿನಲ್ಲಿ ಮಾರಾಟ ಮಾಡಲು ಬೆಂಗಳೂರಿನಿಂದ ರಕ್ತ ಚಂದನ ಮರವನ್ನು ಕಾರಿನಲ್ಲಿ ಸಾಗಿಸುತ್ತಿದ್ದ ಮೂವರನ್ನು ಕೊಳ್ಳೆಗಾಲ ನಗರದ ಪೊಲೀಸ್ ಅರಣ್ಯ ಸಂಚಾರಿ ದಳ ಬಂಧಿಸಿದೆ.
ಬೆಂಗಳೂರಿನ ವಿಜಯನಗರದ ನಿವಾಸಿ ಅರುಣ್ ಕುಮಾರ್ (26), ಪಂಡಿತರ ಪಾಳ್ಯ ನಿವಾಸಿ ಆನಂದ್ (46) ಹಾಗೂ ತುಮಕೂರಿನ ಸೋಮೇಶ್ವರಪುರಂನ ಮುಸ್ತಫ (52) ಬಂಧಿತ ಆರೋಪಿಗಳಾಗಿದ್ದಾರೆ.
ಬೆಂಗಳೂರು ಕಡೆಯಿಂದ ಕೊಳ್ಳೇಗಾಲಕ್ಕೆ ಆಗಮಿಸುತ್ತಿದ್ದಂತೆ ಕಾರನ್ನು ತಡೆದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕಾರಿನಲ್ಲಿದ್ದ 17.04 ಲಕ್ಷ ರೂ. ಮೌಲ್ಯದ ರಕ್ತ
ಚಂದನ ಮರದ ತುಂಡುಗಳು, 3 ಮೊಬೈಲ್, 1
ಕಾರು ಮತ್ತು ನಗದು ವಶಪಡಿಸಿಕೊಳ್ಳಲಾಗಿದೆ.

ರಾಜ್ಯ