
ಬಕ್ರೀದ್ ಎಂದೇ ವಿಷ್ಲೇಶಿಸುವ ಈದ್-ಉಲ್ ಅಝ್ಹಾ ಹಬ್ಬವನ್ನು ದೇಶ ವಿದೇಶಗಳಲ್ಲಿ ಸಂಭ್ರಮದಿಂದ ಆಚರಿಸುವಾಗ ಕಳಂಜದಲ್ಲೂ ಅದೇ ಸಂಭ್ರಮವು ಕಾಣುವಂತಾಯಿತು. ತಕ್ಬೀರಿನೊಂದಿಗೆ ಪ್ರಾರಂಭವಾದ ಹಬ್ಬದ ಸಂಭ್ರಮದಲ್ಲಿ ಅಬ್ಬಾಸ್ ಮದನಿಯರು ಖತುಬಾ ನೆರವೇರಿಸಿದರು.


ಬಲಿ ಕರ್ಮವು ಈ ಹಬ್ಬದ ದಿವಸ ಪ್ರಾಮುಖ್ಯತೆಯಿಂದ ಕೂಡಿದೆ. ಈದ್ ಪ್ರಾರ್ಥನೆ ಮತ್ತು ಖುತುಬಾದ ನಂತರ ದ್ವೇಷ, ವೈಷಮ್ಯವಿರುವ ಪ್ರತಿಯೊಬ್ಬರೂ ಆಲಿಂಗನದೊಂದಿಗೆ ಪ್ರೀತಿಯ ಸಂದೇಶವನ್ನು ಸಾರಿದರು.
