ನೋಡ ನೋಡುತ್ತಿದ್ದಂತೆ 45 ಕೆಜಿ ತೂಕದ ಗಂಡು ಆಡುವನ್ನು ನುಂಗಲು ಯತ್ನಿಸಿದ ಬೃಹತ್ ಹೆಬ್ಬಾವು.

ನೋಡ ನೋಡುತ್ತಿದ್ದಂತೆ 45 ಕೆಜಿ ತೂಕದ ಗಂಡು ಆಡುವನ್ನು ನುಂಗಲು ಯತ್ನಿಸಿದ ಬೃಹತ್ ಹೆಬ್ಬಾವು.

ಕಡಬ: ಕಡಬ ತಾಲೂಕಿನ ಐತ್ತೂರು ಗ್ರಾಮದ ಬ್ರಾಂತಿಕಟ್ಟೆ ಕೊಡೆಂಕಿರಿ ಎಂಬಲ್ಲಿ ಭಾರೀ ಗಾತ್ರದ ಹೆಬ್ಬಾವು, ಆಡೊಂದನ್ನು ನುಂಗಲು‌ ಸುಮಾರು ಒಂದು ತಾಸು ಸೆಣಸಿ ವಿಫಲ ಯತ್ನ ನಡೆಸಿದ ಘಟನೆ ಮಂಗಳವಾರ ಸಂಜೆ ನಡೆದಿದೆ.


ಸ್ಥಳೀಯರಾದ ಜಾರ್ಜ್ ಕುಟ್ಟಿ ಎಂಬವರಿಗೆ ಸೇರಿದ ಸುಮಾರು 45 ಕೆಜಿ ತೂಕದ ಗಂಡು ಆಡು ಹೆಬ್ಬಾವಿನ ಉರುಳಿಗೆ ಸಿಕ್ಕಿ ಉಸಿರುಗಟ್ಟಿ ಪ್ರಾಣ ಬಿಟ್ಟಿದೆ. ಆಡಿನ ತಲೆಯ ಭಾಗವನ್ನು ನುಂಗಿದರೂ ಉಳಿದ ಭಾಗವನ್ನು ನುಂಗಲು ಸಾಧ್ಯವಾಗದೆ ಸೋತು ಸತ್ತ ಆಡನ್ನು ಸ್ಥಳದಲ್ಲೇ ಬಿಟ್ಟು ಪೊದೆಯೊಳಗೆ ಸೇರಿಕೊಂಡಿದೆ.

ರಾಜ್ಯ