
ಪುತ್ತೂರು: ಹಿಂದುತ್ವವನ್ನು ಬೆಳೆಸಿದ ಗುರುಗಳಾದ ಪುತ್ತೂರಿನ ಡಾ.ಎಂ.ಕೆ.ಪ್ರಸಾದ ಅವರನ್ನೇ ಮೆಟ್ಟಿದ ಅರುಣ್ ಕುಮಾರ್ ಪುತ್ತಿಲ ಒಂದು ವಿಷಜಂತು ಇದ್ದಂತೆ ಎಂದು ಆರ್.ಎಸ್.ಎಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಪುತ್ತೂರಿನಲ್ಲಿ ಬಿ ಜೆ ಪಿ ಗೆ ಬಂಡಾಯವಾಗಿ ಸ್ಪರ್ಧೆ ಮಾಡಿರುವ ಅರುಣ್ ಪುತ್ತಿಲ ವಿರುದ್ದ ಆಕ್ರೋಶ ವ್ಯಕ್ತ ಪಡಿಸಿದ್ದಾರೆ


ಪುತ್ತೂರಿನಲ್ಲಿ ಪತ್ರಕರ್ತರ ಜೊತೆ ಮಾತನಾಡಿದ ಅವರು ಅರುಣ್ ಕುಮಾರ್ ರನ್ನು ಬೆಳೆಸಿದ್ದೇ ಡಾ.ಎಂ.ಕೆ.ಪ್ರಸಾದ್. ಆದರೆ ಅವರ ಮಾತನ್ನೇ ಕೇಳದಷ್ಟರ ಮಟ್ಟಿಗೆ ಅರುಣ್ ಪುತ್ತಿರಲ ಬೆಳೆದಿದ್ದು, ನಾವು ಹಿಂದೆಯೇ ಈ ವಿಚಾರವನ್ನು ಡಾ.ಪ್ರಸಾದ್ ಬಳಿ ಹೇಳಿದ್ದೆವು. ಅವನನ್ನು ದೂರವಿಡಿ ಎಂದು ಹೇಳಿಕೊಂಡರೂ ಡಾ.ಪ್ರಸಾದ್ ಅರುಣ್ ನನ್ನು ತಮ್ಮ ಬಳಿಯೇ ಇರಿಸಿಕೊಂಡಿದ್ದರು.
ಅರುಣ್ ಪುತ್ತಿಲನ ಎಲ್ಲಾ ವಿಚಾರಗಳು ಗೊತ್ತಿದ್ದರಿಂದ ನಾನು ಅವರನ್ನು ದೂರ ಇಟ್ಟಿದ್ದೆ, ಇದೀಗ ಡಾ.ಪ್ರಸಾದ್ ಅವರಿಗೂ ಆತನ ವಿಚಾರ ತಡವಾಗಿಯಾದರೂ ಅರಿವಾಗಿದೆ. ಆತ ಒಂದು ವಿಷಜಂತು ಎಂದು ಪ್ರಭಾಕರ್ ಭಟ್ ಅರುಣ್ ಪುತ್ತಿಲ ವಿರುದ್ಧ ಹರಿಹಾಯ್ದರು.