
ಸುಳ್ಯನಗರದಲ್ಲಿ ನಿನ್ನೆ ಬೀಸಿದ ಗಾಳಿಮಳೆಗೆ ಪರಿವಾರ ಕಾನದಲ್ಲಿ ಮರವೊಂದು ಮುರಿದು ಬಿದ್ದು ಕೋಳಿ ಮಾರಟದ ಅಂಗಡಿಗೆ ಹಾನಿಯಾದ ಘಟನೆಎ.26 ರ ಸಂಜೆ ನಡೆದಿದೆ. ಸಂಜೆ ಬೀಸಿದ ಗಾಳಿಗೆ ಪಕ್ಕದ ಶಿವಾನಂದ ಎನ್ನುವವರ ಸೈಟ್ ನಿಂದ ಮರ ನಿತ್ಯ ಚಿಕನ್ ಸೆಂಟರ್ ಮೇಲೆ ಬಿದ್ದಿದೆ ಕಟ್ಟಡದ ತಗಡು ಶೀಟಿನ ಮಾಡು ಮತ್ತು ಪಕ್ಕದ ವಿಷ್ಣು ಗ್ಯಾರೇಜ್ ಹೆಂಚುಗಳು ಹಾನಿಯಾಗಿದೆ ಸ್ಥಳಿಯರ ಸಹಕಾರದಿಂದ ಮರ ತೆರವು ಮಾಡಲಾಗಿದೆ ಎಂದು ತಿಳಿದು ಬಂದಿದೆ,



