ಹೊನ್ನಾವರದಲ್ಲಿ “ಒಕ್ಕಲು ಉತ್ಸವ” ಸಂಸ್ಕೃತಿಯ ಉಳಿವಿಗಾಗಿ, ಸಮುದಾಯದ ಸಂಘಟನೆ ಯಾಗಬೇಕಾಗಿದೆ: ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ.

ಹೊನ್ನಾವರದಲ್ಲಿ “ಒಕ್ಕಲು ಉತ್ಸವ” ಸಂಸ್ಕೃತಿಯ ಉಳಿವಿಗಾಗಿ, ಸಮುದಾಯದ ಸಂಘಟನೆ ಯಾಗಬೇಕಾಗಿದೆ: ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ.

ತಾಲೂಕು ಒಕ್ಕಲಿಗರ ಸಂಘ ಹೊನ್ನಾವರ ಮತ್ತು ಬೈರವಿ ಮಹಿಳಾ ಸಂಘದ ಜಂಟಿ ಆಶ್ರಯದಲ್ಲಿ ನಡೆದ ಒಕ್ಕಲು ಉತ್ಸವ ತ ತಾಲ್ಲೂಕು ಒಕ್ಕಲಿಗರ ಸಂಘ ಹೊನ್ನಾವರ ಕೆಳಗಿನೂರು ಸಭಾ ಮಂಟಪದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಮಹಾಸ್ವಾಮೀಜಿಯವರು ದಿವ್ಯಸಾನಿಧ್ಯ ವಹಿಸಿ , ಉದ್ಘಾಟಿಸಿ, ಒಕ್ಕಲಿಗರ ಸಂಸ್ಕೃತಿ ಅನನ್ಯವಾಗಿರುವಂತದ್ದು, ಈ ಸಂಸ್ಕೃತಿ ಮುಂದಿನ ತಲೆಮಾರಿಗೂ ತಿಳಿಸುವ ನಿಟ್ಟಿನಲ್ಲಿ ಸಮುದಾಯದ ಸಂಘಟನೆಯಾಗಬೇಕು ಎಂದು ಅವರು ಆಶೀರ್ವಚನ ನೀಡಿದರು. ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾ ಸಂಸ್ಥಾನ ಮಠದ ಪ್ರಧಾನ ಕಾರ್ಯದರ್ಶಿಗಳಾದ ಶ್ರೀ ಪ್ರಸನ್ನನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಂಗಳೂರು ಶಾಖಾ ಮಠದ ಡಾ. ಶ್ರೀ ಧರ್ಮಪಾಲನಾಥ ಸ್ವಾಮೀಜಿ, ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಬ್ರಹ್ಮಚಾರಿಗಳಾದ ನಿಶ್ಚಲಾನಂದನಾಥ ಸ್ವಾಮೀಜಿ , ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಟಾನ ವೇದಿಕೆ ಅಧ್ಯಕ್ಷರಾದ ಭಾರತಿ ಶಂಕರ್ ತಾಲೂಕು ಒಕ್ಕಲಿಗರ ಸಂಘ ಹೊನ್ನಾವರ ಅಧ್ಯಕ್ಷರಾದ ಶ್ರೀ ತಿಮ್ಮಪ್ಪ ಜಿ ಗೌಡ, ಭೈರವಿ ಮಹಿಳಾ ಸಹಕಾರಿ ಸಂಘ ಹೊನ್ನಾವರ, ಅಧ್ಯಕ್ಷರಾದ ಶ್ರೀಮತಿ ಶಾಂತಿ ಮಹದೇವಗೌಡ, ಸ್ವಾತಂತ್ರ್ಯ ಹೋರಾಟಗಾರ ಕೆದಂಬಾಡಿ ರಾಮಯ್ಯ ಗೌಡ ಸ್ಮಾರಕ ರಚನೆ ಉಸ್ತುವಾರಿ ಸಮಿತಿ ಅಧ್ಯಕ್ಷ ಕಿರಣ್ ಕುಮಾರ್ ಬುಡ್ಲೆಗುತ್ತು ಸುಳ್ಯ, ಒಕ್ಕಲಿಗರ ಯುವ ವೇದಿಕೆ ಹೊನ್ನಾವರ ಅಧ್ಯಕ್ಷರಾದ ಶ್ರೀ ವಸಂತ ಗೌಡ, ಶ್ರೀ ಶಂಕರ ಗೌಡ ಹೆಸ್ಕಾಂ, ರಾಜ್ಯ ಚುಂಚಾದ್ರಿ ಮಹಿಳಾ ವೇದಿಕೆ ನಿರ್ದೇಶಕರಾದ ಶ್ರೀಮತಿ ಜಯಂತಿ ಬಾಲಚಂದ್ರ ಗೌಡ, ರಾಜ್ಯ ಚುಂಚಾದ್ರಿ ಮಹಿಳಾ ಪ್ರತಿಷ್ಟಾನ ವೇದಿಕೆ ನಿರ್ದೇಶಕರಾದ ಶ್ರಿಮತಿ ಮಂಜುಳಾ ,ಮತ್ತು ಗಣ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತರಿದ್ದರು.

ರಾಜ್ಯ