
ರಾಜ್ಯ ಸಂಪನ್ಮೂಲ ವ್ಯಕ್ತಿಗಳಾದ ಆದರ್ಶ ಗೋಖಲೆ ಯವರಿಂದ ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ “ಕಲಿಕೆಯ ಕೌಶಲ” ಕಾರ್ಯಕ್ರಮ ಹಾಗೂ ಚುಂಚಾದ್ರಿ ಫೌಂಡೇಶನ್ ಕೋರ್ಸ್ ಅರಿವಿನ ಕಾರ್ಯಕ್ರಮ ಮಾ 02 ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಸ್ವಾಮೀಜಿಯವರ ಸಾನಿದ್ಯದಲ್ಲಿ ನಡೆಯಿತು .



ಈ ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಶಿಕ್ಷಣ ಟ್ರಸ್ಟ್ (ರಿ.)ನ ನಿರ್ದೇಶಕರಾದ ಸುಳ್ಯದ ಸತೀಶ್. ಡಿ.ವಿ, ಶ್ರೀ ಆದಿಚುಂಚನಗಿರಿ ಸಂಯುಕ್ತ ಆಂಗ್ಲ ಮಾಧ್ಯಮ ಶಾಲೆ ಮತ್ತು ಬಿಜಿಎಸ್ ವಸತಿಯುತ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ಶ್ರೀಮತಿ ಹೇಮಾ. ಎಸ್. ಆರ್. ಬಿಜಿಎಸ್ ವಸತಿ ಶಾಲೆಯ ವ್ಯವಸ್ಥಾಪಕರಾದ ಅಮೀಶ್. ಹೆಚ್. ಕೆ ಹಾಗೂ ಬಿಜಿಎಸ್ ಆಂಗ್ಲ ಮಾಧ್ಯಮ ವಸತಿ ವಿದ್ಯಾಲಯ ಶರಾವತಿ ನಗರ ಶಿವಮೊಗ್ಗದ ಪ್ರಾಂಶುಪಾಲರು, ಸಿಬ್ಬಂದಿ ವರ್ಗದವರು, ವಿದ್ಯಾರ್ಥಿಗಳು ಹಾಗೂ ಪೋಷಕರು, ಉಪಸ್ಥಿತರಿದ್ದರು.


