ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದ ಜನತೆಯ ಸ್ನೇಹ ಸಮ್ಮಿಲನ.

ಬೆಂಗಳೂರಿನಲ್ಲಿ ನೆಲೆಸಿರುವ ಸುಳ್ಯ ವಿಧಾನ ಸಭಾ ಕ್ಷೇತ್ರದ ಜನತೆಯ ಸ್ನೇಹ ಸಮ್ಮಿಲನ.

ಸಚಿವ ಎಸ್. ಅಂಗಾರರಿಗೆ ಸನ್ಮಾನ

ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಶಿಕ್ಷಣ. ಉದ್ಯೋಗ ವ್ಯಾಪಾರ ಹಾಗೂ ಇನ್ನಿತರ ಉದ್ದೆಶದಿಂದ ನೆಲೆಸಿರುವ ಸುಳ್ಯದವರಿಗಾಗಿ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಬೆಂಗಳೂರಿನಲ್ಲಿ ಆಯೋಜಿಸಲಾಗಿತ್ತು,


ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸುಳ್ಯದ ಅಂಗಾರ ಅವರು ವಹಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಸ್ನೇಹ ಸಮ್ಮಿಲನ ತಂಡದಿಂದ ಅಂಗಾರರನ್ನು ಸನ್ಮಾನಿಸಲಾಯಿತು.
ಸಾಂಸ್ಕೃತಿಕ ಕಾರ್ಯಕ್ರಮವನ್ನು ಜೀ ಟಿವಿ ಲಿಟ್ಲ್ ಚಾಂಪ್ಸ್ ಕುಮಾರಿ ಜ್ಞಾನ ಗುರುರಾಜ್ ರಿಂದ ಸಂಗೀತ ಕಾರ್ಯಕ್ರಮ ಹಾಗೂ ಗುರುದೇವ್ ಅಕಾಡೆಮಿ ಇನ್ಷ್ ಸ್ಟಿಟ್ಯೂಟ್ ಆಪ್ ಬಳಗದಿಂದ ಭರತನಾಟ್ಯ ಕಾರ್ಯಕ್ರಮ ನಡೆಯಿತು.


ವೇದಿಕೆಯಲ್ಲಿ ಎ. ವಿ. ತೀರ್ಥರಾಮ, ವೆಂಕಟ್ ದಂಬೆಕೋಡಿ, ವೆಂಕಟ್ ವಳಲಂಬೆ, ರಾಜು ಲಿಂಬಾವಳಿ,ಆನಂದ ಮೂರ್ತಿ ,ಭರತ್ ಶೆಟ್ಟಿ, ನ್ಯಾಯವಾದಿ ಜೆ ಪಿ ರೈ ಪೆರುವಾಜೆ, ಹರ್ಷಿತ್ ಕೊಡಪಾಲ ಸೇರಿದಂತೆ ಬೆಂಗಳೂರಲ್ಲಿ ನೆಲೆಸಿದ ಬಹುತೇಕ ಸುಳ್ಯದವರು ಉಪಸ್ಥಿತರಿದ್ದರು,
ನಾಗೇಶ್ ಕುಮಾರ್ ಕಲ್ಲುಮುಟ್ಳು ಸ್ವಾಗತಿಸಿ , ನಾರಾಯಣ ಹೆಗ್ಗಡೆ ವಂದಿಸಿ, ಶ್ರೀನಾಥ್ ಹೆಗ್ಗಡೆ ಬೆಳ್ಳಾರೆ ಕಾರ್ಯಕ್ರಮ ನಿರೂಪಿಸಿದರು.
ಉದ್ಯಮಿ ನಾಗೇಶ್ ಕುಮಾರ್, ಉದ್ಯಮಿ ಲಕ್ಷ್ಮೀನಾರಾಯಣ ಕಣಿಪ್ಪಿಲ ಖಂಡಿಗೆಮೂಲೆ ಇವರು ಸಹಕರಿಸಿದರು.

ರಾಜ್ಯ