ಮೀಸಲಾತಿ ಕ್ಷೇತ್ರವಾದ ಸುಳ್ಯದಲ್ಲಿ 30 ವರ್ಷದಿಂದ ನಮ್ಮ ಸಮುದಾಯದವರನ್ನು ಕಡೆಗಣಿಸಲಾಗುತ್ತಿದೆ :ಆದಿ ದ್ರಾವಿಡ ಸಮುದಾಯ ಅಸಮದಾನ:

ಮೀಸಲಾತಿ ಕ್ಷೇತ್ರವಾದ ಸುಳ್ಯದಲ್ಲಿ 30 ವರ್ಷದಿಂದ ನಮ್ಮ ಸಮುದಾಯದವರನ್ನು ಕಡೆಗಣಿಸಲಾಗುತ್ತಿದೆ :ಆದಿ ದ್ರಾವಿಡ ಸಮುದಾಯ ಅಸಮದಾನ:

ರಾಜಕೀಯ ಪ್ರಮುಖ ಪಕ್ಷಗಳು ಈ ಬಾರಿ ಆದಿ ದ್ರಾವಿಡ ಸಮುದಾಯದವರನ್ನು ಸುಳ್ಯದಲ್ಲಿ ಅಭ್ಯರ್ಥಿ ಪಕ್ಷಗಳು ಘೋಷಿಸಬೇಕು ಗೆಲ್ಲುವ ಮುಂಚೂಣಿ ಪಕ್ಷಗಳು ಸೀಟು ನೀಡ ಬೇಕು ತಾಲೂಕಿನಲ್ಲಿ 25000 ಮತ ಆದಿದ್ರಾವಿಡ ಸಮುದಾಯದವರಿದ್ದು,ಈ ಭಾರಿ ರಾಷ್ಟ್ರೀಯ ಪಕ್ಷಗಳು ಸುಳ್ಯದಲ್ಲಿ ಆದಿದ್ರಾವಿಡ ಸಮುದಾಯದ ಅಭ್ಯರ್ಥಿಗಳಿಗೆ ಅವಕಾಶ ನೀಡಬೇಕು ಎಂದು ಆದಿ ದ್ರಾವಿಡ ಸಮಾಜ ಸೇವಾ ಸಂಘ ಆಗ್ರಹ ವ್ಯಕ್ತಪಡಿಸಿದೆ.

ಸುಳ್ಯದ ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಸ್ಟಿ ನಡೆಸಿ ಮಾತನಾಡಿದ ಆದಿ ದ್ರಾವಿಡ ಯುವ ವೇದಿಕೆ ಜಿಲ್ಲಾಧ್ಯಕ್ಷ ರಾಮಚಂದ್ರ ಮಾತನಾಡಿ ಸುಳ್ಯ ತಾಲೋಕಿನಲ್ಲಿ ಗೌಡ ಸಮುದಾಯದ ಬಳಿಕದ ಅತಿ ದೊಡ್ಡ ಸಮುದಾಯ ನಮ್ಮದು , ಆದರೂ ಇದುವರೆಗೆ ಸುಳ್ಯದಲ್ಲಿ ಆದಿ ದ್ರಾವಿಡ ಸಮುದಾಯಕ್ಕೆ ಯಾವುದೇ ಜಾಗ ಮಂಜೂರು ಆಗಿಲ್ಲ ಅಭಿವೃದ್ದಿಯಾಗದ 25 ಕ್ಕೂ ಹೆಚ್ಚು ಅಭಿವೃದ್ದಿ ಕಾಣದ ಮಹಮ್ಮಾಯಿ ದೈವಸ್ಥಾನಗಳಿವೆ. ಇಂದಿಗೂ ಸೀರೆಗಳನ್ನು ಬಳಸಿ ಶೌಚಾಲಯ ನಿರ್ಮಿಸಿ ಬದುಕು ಸಾಗಿಸಬೇಕಾದ ಅನಿವಾರ್ಯತೆಯಲ್ಲಿ ಆದಿ ದ್ರಾವಿಡ ಸಮುದಾಯವಿದೆ.ಸ್ವಾಭಿಮಾನಿಗಳಾಗಿರುವ ಆದಿ ದ್ರಾವಿಡ ಸಮುದಾಯಕ್ಕೆ ದಕ್ಕೆಯಾಗುತ್ತಿವೆ, ಮೀಸಲಾತಿ ಕ್ಷೇತ್ರವಾಗಿರುವ ಸುಳ್ಯದಲ್ಲಿ ದಲಿತರನ್ನು ಉದ್ದರಿಸುತ್ತಿರುವ ಕೆಲಸ ಆಗುತ್ತಿಲ್ಲ. ಹಾಗಾಗಿ ನಮ್ಮ ಸಮುದಾಯದ ಗೆಲ್ಲುವ ಮುಂಚೂಣಿ ಪಕ್ಷಗಳು ಅವಕಾಶ ನೀಡಬೇಕು, ಹಾಗಿಲ್ಲವಾದಲ್ಲಿ ಮತದಾನದ ಸಮಯ ನಾವು ಪ್ರತ್ಯೇಕ ನಿರ್ಧಾರ ಘೋಷಣೆ ಮಾಡುವ ಅನಿವಾರ್ಯತೆಯಿದೆ ಎಂದು ಹೇಳಿದ್ದಾರೆ.
ಪತ್ರಿಕಾಗೋಸ್ಟಿಯಲ್ಲಿ ಆದಿದ್ರಾವಿಡ ಸಮಾಜ ಸೇವಾ ತಾಲೂಕು ಅಧ್ಯಕ್ಷ ಮೋನಪ್ಪ, ಗೋಪಾಲ, ಕಾಂಜೇಶ ಕಿಲಂಗೋಡಿ, ಕುಮಾರ್ ಪಾನತ್ತಿಲ ಮೊದಲಾದವರಿದ್ದರು.

ರಾಜ್ಯ