
ಪೆರಾಜೆ ಕುಂಬಳಚೇರಿ ಶ್ರೀ ವಯನಾಟ್ ಕುಲವನ್ ದೈವಕಟ್ಟು ಮಹೋತ್ಸವ ಧಾರ್ಮಿಕ ಸಭೆಯು
ದೈವಕಟ್ಟು ಮಹೋತ್ಸವ ಸಮಿತಿ ಅಧ್ಯಕ್ಷರಾದ ಹೊನ್ನಪ್ಪ ಕೊಳಂಗಾಯ ರವರ ಅಧ್ಯಕ್ಷತೆಯಲ್ಲಿ ದೈವಸ್ಥಾನ ವಠಾರದಲ್ಲಿ ನಡೆಯಿತು ಉದ್ಘಾಟನೆಯನ್ನು ಬ್ರಹ್ಮಶ್ರೀ ವೇದಮೂರ್ತಿ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರು
ದೀಪಪ್ರಜ್ವಲನೆಯೊಂದಿಗೆ ನೆರವೇರಿಸಿದರು.

ನಂತರ ಆಶೀರ್ವಚನ ನೀಡಿ ಮಾತನಾಡಿ ಕೇರಳದಿಂದ ಬಂದ ಆಚರಣೆ , ಕೊಡಗು ತುಳುನಾಡಿನಲ್ಲಿ ಕಾಣಬಹುದಾಗಿದೆ, ಬಿಲ್ಲವರು ಒಂದು ವಿಶಿಷ್ಠ ಕುಲ, ವೀರರಾಗಿ ,ಕಲಾವಂತರಾಗಿದ್ದರು.ಮನುಷ್ಯನಲ್ಲಿ ಸಂಪತ್ತು ಎಷ್ಟಿದ್ದರು ಆಚಾರವಿಲ್ಲ ಜೀವನ ನಿಷ್ಪಯೋಜಕ, ನಿಮ್ಮ ಆಚಾರಕ್ಕೆ ಅನುಗುಣವಾಗಿ ನಿಮ್ಮ ಗುಣಗಳನ್ನು ಮಾತು ಮತ್ತು ದೇಹಬಾಷೆಗಳಿಂದ ತಿಳಿಯಬಹುದು, ವೈವಿದ್ಯತೆ ಪ್ರಕ್ರತಿ ನಿಯಮ, ಪ್ರಕೃತಿಗೆ ಅನುಗುಣವಾಗಿ ನಾವಿರಬೇಕು, ಈ ದೇಶ ಪ್ರತಿಯೊಬ್ಬರನ್ನು ಗೌರವಿಸುವ ದೇಶ , ಭಾರತ ಅರುವತ್ತನಾಲ್ಕು ಕ್ಷೇತ್ರಕಲೆಗಳ ಸಂಯೋಜನೆಯಿಂದ ನಿರ್ಮಾಣವಾಗಿದೆ, ಕಲಾ ಉಪಾಸಕನಲ್ಲಿ ದೈವತ್ವವನ್ನು ಕಾಣುವುದು ಈ ಮಣ್ಣಿನ ಗುಣ,ದೇವಸ್ಥಾನದ ವಾಸ್ತು ಶಾಸ್ತ್ರಕ್ಕೂ ಮನುಷ್ಯನ ದೇಹ ಶಾಸ್ತ್ರಕ್ಕೂ ಸಾಮ್ಯತೆಯಿದೆ.ಪ್ರೀತಿ ವಿಶ್ವಾಸಗಳು ಪರಸ್ಪರ ಪಸರಿಸಲಿ ಎಂದು ಹೇಳಿದರು.

ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಪೆರಾಜೆ ಶ್ರೀ ಶಾಸ್ತಾವು ದೇವಸ್ಥಾನದ ಆಡಳಿತ ಮೊಕ್ತೇಸರರಾದ ಜಿತೇಂದ್ರ ನಿಡ್ಯಮಲೆ, ಮಡಿಕೇರಿ ತಾಲೋಕು ಅಕ್ರಮ ಸಕ್ರಮ ಸಮಿತಿ ಅಧ್ಯಕ್ಷ ನಾಗೇಶ್ ಕುಂದಲ್ಪಾಡಿ ಭಾವನೆಗಳನ್ನು ಜೋಡಿಸಲು ಬಾಷೆಗಳ ತೊಡಕಿಲ್ಲ ತೀಯ ಸಮಾಜ ತನ್ನ ಪರಂಪರೆಯ ಸಂಸ್ಕೃತಿಯನ್ನು ಉಳಿಸಿಕೊಂಡು ಮಾದರಿಯಾಗಿದೆ ಎಂದರು.
ವಯನಾಟ್ ಕುಲವನ್ ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಕೆ ಕೆ ಪದ್ಮಯ್ಯ, ಕುತ್ತಿಕೋಲು ತಂಬುರಾಟಿ ಭಗವತಿ ಕ್ಷೇತ್ರದ ಅಧ್ಯಕ್ಷ ಕುಂಞಿಕಣ್ಣ ಬೇಡಗ, ಸ್ಥಾನಿಕ ಪ್ರಮುಖರಾದ ಸತ್ಯನ್ ಕಾರ್ನೂರಚ್ಚನ್ , ಪೆರಾಜೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಚಂದ್ರಕಲಾ ಬಾಲಚಂದ್ರ , ಶ್ರೀ ಶಾಸ್ಥಾವು ದೇವಸ್ಥಾನದ ದೇವ ತಕ್ಕರಾದ ರಾಜಗೋಪಾಲ್ ರಾಮಕಜೆ, ದೈವಕಟ್ಟು ಮಹೋತ್ಸವ ಸಮಿತಿಯ ಸಂಘಟನಾ ಕಾರ್ಯದರ್ಶಿ ಉದಯಚಂದ್ರ ಕುಂಬಳಚೇರಿ ಸ್ವಾಗತಿಸಿ, ಪ್ರ. ಕಾರ್ಯದರ್ಶಿ ಪವಿತ್ರನ್ ಗುಂಡ್ಯ ವಂದಿಸಿದರು. ಮನೋಜ್ ನಿಡ್ಯಮಲೆ ಕಾರ್ಯಕ್ರಮ ನಿರೂಪಿಸಿದರು.