ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ…?

ಪ್ರಧಾನಿ ನರೇಂದ್ರ ಮೋದಿ ಮಂಗಳೂರಿಗೆ…?

ಮಂಗಳೂರು: ಚುನಾವಣೆ ಹತ್ತಿರ ಬರುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಇದೇ ಮಾರ್ಚ್‌ ನಲ್ಲಿ ಮಂಗಳೂರಿಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಮಾರ್ಚ್‌ ಮೊದಲ ವಾರ ಪ್ರಧಾನಿ ದ.ಕ. ಜಿಲ್ಲೆಗೆ ಬರುತ್ತಾರೆ ಎನ್ನುವ ಬಗ್ಗೆ ಮಾಹಿತಿ ಇದೆ. ಆದ್ರೆ ಅಧಿಕೃತವಾಗಿ ಪಕ್ಷದಿಂದ ಪ್ರಕಟನೆ ಬಂದಿಲ್ಲವಾದರೂ ಈ ಬಗ್ಗೆ ಸಾಧ್ಯತೆಗಳನ್ನು ನಾಯಕರು ಅಲ್ಲಗಳೆದಿಲ್ಲ. ಈಗಾಗಲೇ ಗೃಹಸಚಿವ ಅಮಿತ್‌ ಶಾ ಅವರು ಆಗಮಿಸಿ ಬಿಜೆಪಿ ಕಾರ್ಯಕರ್ತರನ್ನು ಹುರಿದುಂಬಿಸಿ ಚುನಾವಣೆಗೆ ಸಜ್ಜಾಗುವಂತೆ ಕರೆ ನೀಡಿ ತೆರಳಿದ್ದಾರೆ. ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ ಫೆ. 20ರಂದು ಉಡುಪಿಗೆ ಆಗಮಿಸುವ ಕಾರ್ಯಕ್ರಮ ಇದೆ. ಇದರೊಂದಿಗೆ ಮೋದಿಯವರೂ ದ.ಕ. ಜಿಲ್ಲೆಗೆ ಆಗಮಿಸಲಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ರಾಜ್ಯ