
ಅಡಿಕೆ ಆಮದು ದರ ಏರಿಕೆಗೆ ಕೇಂದ್ರ ಸರ್ಕಾರ ನಿರ್ಧರಿಸಿದೆ. ಈ ಬಗ್ಗೆ ಅಧಿಕೃತವಾದ ಮಾಹಿತಿಯನ್ನು ವಾಣಿಜ್ಯ ಇಲಾಖೆ ನೀಡಿದ್ದು. ಆಮದು ದರ 251 ರೂಪಾಯಿಯಿಂದ 351 ರೂಪಾಯಿಗೆ ಏರಿಕೆ ಮಾಡಲಾಗುತ್ತಿದೆ. ಇದರಿಂದಾಗಿ ಆಮದು
ಅಡಿಕೆ ದರ ಮುಂದೆ 351 ರೂಪಾಯಿ ನಿಗದಿಯಾಗಲಿದೆ. ಹೀಗಾಗಿ ಅಡಿಕೆ ಆಮದು ಮೇಲೆ ಪರಿಣಾಮ ಬೀರಲಿದ್ದು.ದೇಶದ ಅಡಿಕೆ ಧಾರಣೆ ಏರಿಕೆ ಕಾಣುವ ನಿರೀಕ್ಷೆ ಇದೆ.ಅಡಿಕೆ ಆಮದು ದರ ಏರಿಕೆ ಮಾಡಬೇಕು ಎಂದು ಅಡಿಕೆ ಬೆಳೆಗಾರರ ಸಂಸ್ಥೆ ಕ್ಯಾಂಪ್ಕೋ ಸತತ ಪ್ರಯತ್ನ ಮಾಡಿತ್ತು.ಇತ್ತೀಚೆಗೆ ಪುತ್ತೂರಿನಲ್ಲಿ ನಡೆದ ಕೃಷಿ ಯಂತ್ರ ಮೇಳದಲ್ಲೂ ಸಚಿವೆ ಶೋಭಾ ಕರಂದ್ಲಾಜೆ ಈ ಬಗ್ಗೆ ಸಕಾರಾತ್ಮಕವಾಗಿ ಮಾತನಾಡಿದ್ದರು. ಕ್ಯಾಂಪ್ಕೋ ನಿಯೋಗ ಭೇಟಿಯಾಗಿ ಈ ಹಿಂದೆ ಒತ್ತಾಯಿಸಿತ್ತು.
ಇದೀಗ ಕೇಂದ್ರದ ವಾಣಿಜ್ಯ ಇಲಾಖೆಯು ಅಂತಿಮ
ಅಧಿಸೂಚನೆ ಹೊರಡಿಸಿದೆ. ಈ ಬಗ್ಗೆ ಮಂಗಳವಾರ
ನೋಟಿಫೀಕೇಶನ್ ಹೊರಡಿಸಿದೆ. ಈ ಮೂಲಕ ವಿದೇಶಿ ಅಡಿಕೆ ಆಮದು ಮೇಲೆ ಕಡಿವಾಣ ಬೀಳುವ ನಿರೀಕ್ಷೆ ಇದೆ.
ಕಳೆದ ಕೆಲವು ದಿನಗಳಿಂದ ಅಡಿಕೆ ಮಾರುಕಟ್ಟೆಯು ವಿವಿಧ ಕಾರಣಗಳಿಂದಾಗಿ ಇಳಿಕೆಯ ಹಾದಿಯಲ್ಲಿತ್ತು. ಇದೀಗ ಆಮದು ದರ ಏರಿಕೆಯ ನಂತರ ಅಡಿಕೆ ಮಾರುಕಟ್ಟೆಯಲ್ಲಿ ಮತ್ತೆ ಚೇತರಿಕೆ ಕಾಣುವ ನಿರೀಕ್ಷೆ ಇದೆ. ಹೊಸ ಚಾಲಿ ಅಡಿಕೆ ಹಾಗೂ ಹಳೆ ಎರಡರಲ್ಲೂ ಧಾರಣೆ ಏರಿಕೆಯ ನಿರೀಕ್ಷೆ ಇದೆ.

