ಸುಳ್ಯದಲ್ಲಿ ವಿ.ಹಿಂ.ಪ. – ಭಜರಂಗದಳನೇತೃತ್ವದಲ್ಲಿ ಫೆ.12 ರಂದು ರಕ್ತದಾನ ಶಿಬಿರ.

ಸುಳ್ಯದಲ್ಲಿ ವಿ.ಹಿಂ.ಪ. – ಭಜರಂಗದಳ
ನೇತೃತ್ವದಲ್ಲಿ ಫೆ.12 ರಂದು ರಕ್ತದಾನ ಶಿಬಿರ.


ವಿಶ್ವ ಹಿಂದೂ ಪರಿಷತ್, ಭಜರಂಗದಳ ಸುಳ್ಯ, ದುರ್ಗಾವಾಹಿನಿ, ಮಾತೃಶಕ್ತಿ ಆಶ್ರಯದಲ್ಲಿ ಬೃಹತ್ ರಕ್ತದಾನ ಶಿಬಿರವು ಫೆ.12 ರಂದು ಸುಳ್ಯದ ಸರಕಾರಿ ಆಸ್ಪತ್ರೆಯ ಸಭಾಂಗಣದಲ್ಲಿ ನಡೆಯಲಿದೆ ಎಂದು ವಿಶ್ವ ಹಿಂದೂ ಪರಿಷತ್ ತಾಲೂಕು ಸಂಚಾಲಕ ಸೋಮಶೇಖರ ಪೈಕ, ಸಂಘಟನೆಯ ಕಾನೂನು ಸಲಹೆಗಾರ ಸಂದೀಪ್ ವಳಲಂಬೆ ಹಾಗೂ ಭಜರಂಗದಳ ತಾಲೂಕು ಸಂಚಾಲಕ ಹರಿಪ್ರಸಾದ್ ಎಲಿಮಲೆ ತಿಳಿಸಿದ್ದಾರೆ.
ಸುಳ್ಯದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಈ ವಿವರ ತಿಳಿಸಿದ್ದಾರೆ ಹಿಂದೂ ಸಂಘಟನೆಗಳಿಗೆ ಸಮಸ್ಯೆಗಳು ಎದುರಾದ ಸಂದರ್ಭದಲ್ಲಿ ಅದನ್ನು ಸಮರ್ಥವಾಗಿ ಎದುರಿಸುವ ನಿಟ್ಟಿನಲ್ಲಿ ನಮ್ಮ ಸಂಘಟನೆಗಳು ಕೆಲಸ ಮಾಡುತ್ತಿರುವುದಲ್ಲದೆ ಸಮಾಜ ಮುಖಿ ಕಾರ್ಯದಲ್ಲಿಯೂ ತೊಡಗಿಸಿಕೊಂಡಿದೆ. ಇದೀಗ
ಫೆ12 ರಂದು ಸುಳ್ಯದಲ್ಲಿ ರಕ್ತದಾನ ಶಿಬಿರವನ್ನು
ಹಮ್ಮಿಕೊಳ್ಳಲಾಗಿದ್ದು, ಜಿಲ್ಲಾ ಸರಕಾರಿ ಆಸ್ಪತ್ರೆ, ಐಎಂಎ ಸುಳ್ಯ ಸುಳ್ಯ ಸರಕಾರಿ ಆಸ್ಪತ್ರೆಗಳ ಸಹಯೋಗದಲ್ಲಿ ಶಿಬಿರ ಆಯೋಜನೆಯಾಗಿದೆ ಎಂದವರು ವಿವರ ನೀಡಿದರು.ಬೆಳಗ್ಗಿನಿಂದ ಮಧ್ಯಾಹ್ನದ ವರೆಗೆ ರಕ್ತದಾನ ಶಿಬಿರ ನಡೆಯಲಿದ್ದು ಗ್ರಾಮೀಣ ಭಾಗದ ಸುಮಾರು 200 ರಷ್ಟು ಯುವಕರು ಈಗಾಗಲೇ ನೋಂದಾವಣೆ ಮಾಡಿಕೊಂಡಿದ್ದಾರೆ. ಅವರಲ್ಲಿ 120 ರಷ್ಟು ಮಂದಿ ರಕ್ತದಾನ ಮಾಡಲಿದ್ದಾರೆ ಎಂದು ವಿವರ ನೀಡಿದರು.
ಸಮಾರಂಭದಲ್ಲಿ ಸಚಿವ ಎಸ್.ಅಂಗಾರ, ಆರ್.ಎಸ್.ಎಸ್ ಪ್ರಮುಕರಾದ ನ.ಸೀತಾರಾಮ ಸಹಿತ ಹಲವು ಗಣ್ಯರು ಭಾಗವಹಿಸಲಿದ್ದಾರೆ. ಸಭಾ ಕಾರ್ಯಕ್ರಮದ ಸಂದರ್ಭ ರಕ್ತದಾನ ಮಾಡುವಲ್ಲಿ ಮುಂಚೂಣಿಯಾಗಿ ಕೆಲಸ ಮಾಡುವ
ನವೀನ್ ಎಲಿಮಲೆ, ಉದಯ ಭಾಸ್ಕರ್ ಸುಳ್ಯ ಹಾಗೂ ಶರತ್ ಪರಿವಾರ ಇವರನ್ನು ಸನ್ಮಾನಿಸಲಿದ್ದೆವೆ ಎಂದು ಹೇಳಿದರು.ಪತ್ರಿಕಾಗೋಷ್ಠಿಯಲ್ಲಿ ಭಜರಂಗದಳ ಸಹ ಸಂಚಾಲಕ ನವೀನ್ ಎಲಿಮಲೆ, ವಿ.ಹಿಂ. ಪರಿಷತ್ ಕಾರ್ಯದರ್ಶಿ ರಂಜಿತ್ ಸುಳ್ಯ, ಸುಳ್ಯ ಸರಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದ ಪ್ರಸಾದ್ ಸುಳ್ಯ, ಪೂರ್ಣೇಶ್ ಇದ್ದರು.

ರಾಜ್ಯ