ಸುಳ್ಯ: ವಿವಾಹಿತ ಮಹಿಳೆಯೊಂದಿಗೆ ಸಂಬಂಧ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ.ಪತಿಯಿಂದ ಡಿ ವೈ ಎಸ್ಪಿ ಗೆ ದೂರು.

ಸುಳ್ಯ: ವಿವಾಹಿತ ಮಹಿಳೆಯೊಂದಿಗೆ ಸಂಬಂಧ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಬಿಜೆಪಿ ಮುಖಂಡ.ಪತಿಯಿಂದ ಡಿ ವೈ ಎಸ್ಪಿ ಗೆ ದೂರು.

: ಬಿಜೆಪಿ ಮುಖಂಡನೊಬ್ಬ ವಿವಾಹಿತ ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದು ಕಾರಿನಲ್ಲಿ ಹೋಗುತ್ತಿದ್ದಾಗ ರೆಡ್‌ಹ್ಯಾಂಡಾಗಿ ಸಿಕ್ಕಿಬಿದ್ದ ಘಟನೆ ಸುಳ್ಯ ತಾಲೂಕಿನ ಜಾಲ್ಸೂರಿನಲ್ಲಿ ನಡೆದಿದೆ.
ಪುತ್ತೂರು ಬಿಜೆಪಿ ಗ್ರಾಮಾಂತರ ಮಂಡಲದ ಉಪಾಧ್ಯಕ್ಷ ಹಾಗೂ ಪುಣಚ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷರಾದ ಹರಿಪ್ರಸಾದ್‌ ಯಾದವ್‌‌ನನ್ನು ಮಹಿಳೆಯ ಪತಿ ಧರ್ಮದೇಟು ನೀಡಿದ್ದು, ಈ ವೇಳೆ ಆತ ಮಹಿಳೆ ಹಾಗೂ ಕಾರನ್ನು ಬಿಟ್ಟು ಪಕ್ಕದ ಕಾಡಿನಲ್ಲಿ ಪರಾರಿಯಾಗಿದ್ದಾನೆ ಎನ್ನಲಾಗಿದೆ.


ಈ ಕುರಿತು ಮಹಿಳೆಯ ಪತಿ ಬಿಜೆಪಿ ಮುಖಂಡ ಹರಿಪ್ರಸಾದ್‌ ಯಾದವ್‌‌ ವಿರುದ್ಧ ಪುತ್ತೂರು ಡಿವೈಎಸ್ಪಿಯವರಿಗೆ ದೂರು ನೀಡಿದ್ದು, ತನ್ನ ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿರುವುದಾಗಿ ಎಂದು ಆರೋಪಿಸಿದ್ದಾರೆ.


ತನ್ನ ಪತ್ನಿಯನ್ನು ಹರಿ ಪ್ರಸಾದ್‌ ಅನೈತಿಕ ಸಂಬಂಧ ನಡೆಸುವ ದುರುದ್ದೇಶದಿಂದ ಕಾರಿನಲ್ಲಿ ಕರೆದುಕೊಂಡು ಹೋಗಿದ್ದಾನೆ. ಈ ಬಗ್ಗೆ ಮಾಹಿತಿ ಪಡೆದು ಆ ಕಾರನ್ನು ನನ್ನ ಮೋಟಾರ್‌ ಬೈಕ್‌ ಮೂಲಕ ಪುತ್ತೂರಿನಿಂದ ಹಿಂಬಾಲಿಸಿದ್ದೇನೆ. ಸುಳ್ಯ ತಾಲೂಕಿನ ಜಾಲ್ಸೂರು ಎಂಬಲ್ಲಿ ಕಾರನ್ನು ತಡೆಯಲು ಪ್ರಯತ್ನಿಸಿದಾಗ ಹರಿ ಪ್ರಸಾದ್‌ ಬೈಕ್‌ ಮೇಲೆ ವಾಹನ ಚಲಾಯಿಸಿ ಹತ್ಯೆಗೆ ಯತ್ನಿಸಿದ್ದಾನೆ. ತಕ್ಷಣ ತಪ್ಪಿಸಿಕೊಂಡ ನಾನು ಕಾರನ್ನು ತಡೆದಿದ್ದೇನೆ. ಘಟನಾ ಸ್ಥಳದಲ್ಲಿ ಜನರು ಜಮಾಯಿಸುತ್ತಿದ್ದಂತೆಯೇ ಹರಿ ಪ್ರಸಾದ್‌ ಕಾರು ಹಾಗೂ ಪತ್ನಿಯನ್ನು ಬಿಟ್ಟು ಪರಾರಿಯಾಗಿದ್ದಾನೆ ದೂರಿನಲ್ಲಿ ಆರೋಪಿಸಲಾಗಿದೆ.

ರಾಜ್ಯ