
ತನಮನೆಯಲ್ಲಿ ಸಾಕಿದ ಜಾನುವಾರು ತಿವಿದು
ಗಾಯಗೊಂಡು ಮಂಗಳೂರಿನ ಖಾಸಗಿ
ಆಸ್ಪತ್ರೆಗೆ ದಾಖಲಾಗಿದ್ದ ಗುಂಡೂರಿ ಗ್ರಾಮದ
ದರಿಕಂಡ ನಿವಾಸಿ ಸದಾನಂದ ಪೂಜಾರಿ
ಅವರ ಪತ್ನಿ ಮೋಹಿನಿ ಯಾನೆ ಪ್ರೇಮ (45)
ಮೃತಪಟ್ಟಿದ್ದಾರೆ.ಹಟ್ಟಿಯಲ್ಲಿ ಮೇವು ಹಾಕುತ್ತಿದ್ದಾಗ
ಅನಿರೀಕ್ಷಿತವಾಗಿ ದನ ತಿವಿದು ಮೋಹಿನಿ
ಕುತ್ತಿಗೆಯ ಭಾಗಕ್ಕೆ ದನದ ಕೊಂಬು ತಾಗಿ
ತೀವ್ರ ತರಹದ ಗಾಯವಾಗಿತ್ತು. ಕೂಡಲೇ ಮನೆಯವರು ಅವರನ್ನು ಆಸ್ಪತ್ರೆಗೆ ಕೊಂಡೊಯ್ದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಮಂಗೂರಿನ ಆಸ್ಪತ್ರೆಗೆ ಕರೆದೊಯ್ದಿದ್ದರು.ಇನ್ನು ಮಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

