ಸುಳ್ಯ ತಾಲೂಕು ಬಂಟರ ಸಂಘದ ಮಹಾಸಭೆ. ಎನ್.ಜಯಪ್ರಕಾಶ್ ರೈ ನೇತೃತ್ವದ ತಂಡ ಪುನರಾಯ್ಕೆ.

ಸುಳ್ಯ ತಾಲೂಕು ಬಂಟರ ಸಂಘದ ಮಹಾಸಭೆ. ಎನ್.ಜಯಪ್ರಕಾಶ್ ರೈ ನೇತೃತ್ವದ ತಂಡ ಪುನರಾಯ್ಕೆ.

ಸುಳ್ಯ: ಸುಳ್ಯ ತಾಲೂಕು ಬಂಟರ ಯಾನೆ ನಾಡವರ ಸಂಘದ ಮಹಾಸಭೆಯು ಸುಳ್ಯದ ಬಂಟರ ಸಮುದಾಯ ಭವನದಲ್ಲಿ ಭಾನುವಾರ ಅಧ್ಯಕ್ಷ ಎನ್.ಜಯಪ್ರಕಾಶ್ ರೈಯವರ ಅಧ್ಯಕ್ಷತೆಯಲ್ಲಿ ನಡೆಯಿತು. ಪ್ರಧಾನ ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ, ಕೋಶಾಧಿಕಾರಿ ಗಂಗಾಧರ್ ರೈ ಸೋಣಂಗೇರಿ, ಮಹಿಳಾ ಘಟಕದ ಗೌರವಾಧ್ಯಕ್ಷೆ ಕಮಲಾಕ್ಷಿ ಟೀಚರ್, ಅಧ್ಯಕ್ಷೆ ಇಂದಿರಾ ರಾಜಶೇಖರ ರೈ, ಯುವ ಘಟಕದ ಗೌರವಾಧ್ಯಕ್ಷ ಅಮೃತ್ ಕುಮಾರ್ ರೈ, ಅಧ್ಯಕ್ಷ ಪ್ರೀತಮ್ ರೈ ಬೆಳ್ಳಾರೆ ಹಾಗೂ ವಲಯಾಧ್ಯಕ್ಷರುಗಳು ವೇದಿಕೆಯಲ್ಲಿ ಇದ್ದರು.
ಸಂಘದ ಚಟುವಟಿಕೆಗಳ ವರದಿ, ಲೆಕ್ಕಪತ್ರ ಮಂಡನೆಯಾಗಿ ಬಳಿಕ ನೂತನ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಎನ್. ಜಯಪ್ರಕಾಶ್ ರೈ ಯವರ ನೇತೃತ್ವದಲ್ಲಿ ಬಂಟರ ಸಮುದಾಯ ಭವನ ಹೊಸದಾಗಿ ನಿರ್ಮಾಣವಾಗಿದ್ದು , ಸಮುದಾಯ ಭವನದ ಕೆಲಸ ಪೂರ್ಣಗೊಳ್ಳಲು ಬಾಕಿ ಇದ್ದು ಅವರದೇ ತಂಡವನ್ನು ಮುಂದಿನ ಅವಧಿಗೆ ಮುಂದುವರಿಸುವುದಾಗಿ ನಿರ್ಣಯಿಸಲಾಯಿತು.
ಪಿ.ಬಿ.ಸುಧಾಕರ ರೈ ನೆಟ್ ಕಾಮ್, ಕಮಲಾಕ್ಷಿ ಟೀಚರ್, ಶಶಿಧರ್ ಶೆಟ್ಟಿ ಪಡ್ಪು, ದಯಾಕರ ಆಳ್ವ, ಸುನೀಲ್ ರೈ ಪೆರುವಾಜೆ, ಎನ್.ಜಿ. ಪ್ರಭಾಕರ ರೈ, ಕರುಣಾಕರ ರೈ ಕುಕ್ಕಂದೂರು, ಗಂಗಾಧರ್ ರೈ ಸೋಣಂಗೇರಿ, ಸುಭಾಶ್ಚಂದ್ರ ರೈ ತೋಟ, ಮಹಾಬಲ ರೈ ಬೂಡು, ಜೆ.ಕೆ. ರೈ, ವೇದಾವತಿ ಶೆಟ್ಟಿ ಜಾಲ್ಸೂರು, ಅಮೃತ ಕುಮಾರ್ ರೈ, ಪ್ರವೀಣ ರೈ ಮರುವಂಜ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯದರ್ಶಿ ಸುಭಾಶ್ಚಂದ್ರ ರೈ ತೋಟ ವಂದಿಸಿದರು.

ರಾಜ್ಯ