ಸುರತ್ಕಲ್ ಜಲೀಲ್ ಹತ್ಯೆ -ಹಳೇ ರೌಡಿಶೀಟರ್ ಪುತ್ರನ
ಕೈವಾಡದ ಶಂಕೆ.


ಮಂಗಳೂರು ಹೊರವಲಯದ ಕಾಟಿಪಳ್ಳದ ೪ನೇ ಬ್ಲಾಕ್ ನೈತಂಗಡಿ ಎಂಬಲ್ಲಿ ಜಲೀಲ್
ಎಂಬವರನ್ನು ನಿನ್ನೆ ಸಂಜೆ ಚಾಕುವಿನಿಂದ ಇರಿದು ಕೊಲೆ
ಮಾಡಲಾಗಿತ್ತು. ಲತೀಫ ಎಂಬ ಫ್ಯಾನ್ಸಿ ಅಂಗಡಿ
ನಡೆಸುತ್ತಿದ್ದ ಜಲೀಲ್ ಅಂಗಡಿಗೆ ನುಗ್ಗಿ ದುಷ್ಕರ್ಮಿಗಳು
ಚೂರಿಯಿಂದ ಇರಿದು ಪರಾರಿಯಾಗಿದ್ದರು.ಗಂಭೀರ ಗಾಯಗೊಂಡಿದ್ದ ಅವರನ್ನು ಸ್ಥಳೀಯರು
ಆಸ್ಪತ್ರೆಗೆ ಒಯ್ಯುವಷ್ಟರಲ್ಲಿ ಜಲೀಲ್ ಉಸಿರು ಚೆಲ್ಲಿದ್ದರು.ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿಕುಮಾರ್ ಸ್ಥಳಕ್ಕೆ ಬೇಟಿ ನೀಡಿ ಮಾಹಿತಿ ಪಡೆದು ಬೇರೆ ಬೇರೆ ಆಯಾಮಗಳಲ್ಲಿ ತನಿಖೆ ಮುಂದುವರಿಸಿದ್ದಾರೆ . ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮವಾಗಿ ೧೪೪ನೇ ಸೆಕ್ಸನ್ ಅನ್ವಯ ಸುರತ್ಕಲ್, ಪಣಂಬೂರು, ಕಾವೂರು, ಬಜ್ಜೆ ಠಾಣಾ ವ್ಯಾಪ್ತಿಯಲ್ಲಿ ನಿಷೇದಾಜ್ಞೆ ಜಾರಿಗೊಳಿಸಲಾಗಿದೆ. ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪ್ರಕರಣದಲ್ಲಿ ಹಳೇ ರೌಡಿ ಶೀಟರ್‌ರೊಬ್ಬರ ಪುತ್ರನ ಕೈವಾಡದ ಶಂಕೆ ವ್ಯಕ್ತವಾಗಿದ್ದು ಶೀಘ್ರದಲ್ಲಿಯೇ ಬಂಧಿಸುವ ಸಾಧ್ಯತೆ ಇದೆ.

ರಾಜ್ಯ