ಅಕಾಡೆಮಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರವು ಡಾ| ರೇಣುಕಾಪ್ರಸಾದರ ವೈಯಕ್ತಿಕ ನಿರ್ಧಾರವೇ ಹೊರತು ಸಂಸ್ಥೆಯದ್ದಲ್ಲ: ಡಾ ಕೆ.ವಿ ಚಿದಾನಂದ.

ಅಕಾಡೆಮಿಗೆ ಆಡಳಿತಾಧಿಕಾರಿ ನೇಮಕ ಮಾಡುವ ವಿಚಾರವು ಡಾ| ರೇಣುಕಾಪ್ರಸಾದರ ವೈಯಕ್ತಿಕ ನಿರ್ಧಾರವೇ ಹೊರತು ಸಂಸ್ಥೆಯದ್ದಲ್ಲ: ಡಾ ಕೆ.ವಿ ಚಿದಾನಂದ.

ಪ್ರತಿಭಟನೆ ನಡೆಸುವ ಸಿಬ್ಬಂದಿಗಳ ವಿರುದ್ಧ ಎಜ್ಯುಕೇಶನ್ ಆಕ್ಟ್ ಪ್ರಕಾರ ಕಾನೂನು ಕ್ರಮದ ಎಚ್ಚರಿಕೆ

. ಡಾ. ರೇಣುಕಾಪ್ರಸಾದರು ಡಿ.೨೦ರಂದು ಪತ್ರಿಕಾಗೋಷ್ಠಿ ನಡೆಸಿ ತಿಳಿಸಿರುವ ವಿಚಾರ ಸತ್ಯಕ್ಕೆ ದೂರವಾಗಿದ್ದು ದುರುದ್ದೇಶದಿಂದ ಕೂಡಿದೆ. ಡಿ.೨೩ರಂದು ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರವಾಗಿದ್ದು, ಪ್ರತಿಭಟನೆ ನಡೆಸುವ ಸಿಬ್ಬಂದಿಗಳ ವಿರುದ್ಧ ಕಾನೂನು ಕ್ರಮಕ್ಕೆ ಒಳಪಡಿಸಲು ಆಡಳಿತ ಮಂಡಳಿಯು ಹಿಂಜರಿಯುವುದಿಲ್ಲ ಎಂದು ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಅಧ್ಯಕ್ಷ ಡಾ| ಕೆ.ವಿ. ಚಿದಾನಂದ್ ತಿಳಿಸಿದ್ದಾರೆ. ಡಿ 21 ರಂದು ಕೆ.ವಿ.ಜಿ. ಆಯುರ್ವೇದಿಕ್ ಕಾಲೇಜಿನಲ್ಲಿ ಪತ್ರಿಕಾಗೋಷ್ಠಿ ನಡೆಸಿದ ಅವರು, ಮಾತನಾಡಿ ಡಾ.ರೇಣುಕಾಪ್ರಸಾದರು ೩೨ ವರ್ಷದಿಂದ ಅಕಾಡೆಮಿಯಲ್ಲಿ ಕಾರ್ಯದರ್ಶಿಯಾಗಿ, ಪ್ರಧಾನ ಕಾರ್ಯದರ್ಶಿಯಾಗಿ ಇದ್ದವರು. ಕಾನೂನಿನ ವಿರುದ್ಧವಾಗಿ ಅವರು ನಡೆದುಕೊಳ್ಳುತ್ತಿದ್ದಾರೆ. ಅವರೇ ಹೇಳುವಂತೆ ಇದು ಸೊಸೈಟಿ ಆಕ್ಟ್ ಪ್ರಕಾರ ನಡೆಯುವ ಸಂಸ್ಥೆ. ನಮ್ಮ ಸ್ವಂತ ಆಸ್ತಿ ಅಲ್ಲ. ಆದರೆ ರೇಣುಕಾಪ್ರಸಾದರು ಕಾನೂನು ಮೀರಿ ಅವ್ಯವಹಾರಕ್ಕೆ ಪ್ರಯತ್ನಿಸಿದಾಗ ಅದನ್ನು ನಾವು ತಡೆದಿದ್ದೇವೆ. ಕೊರೊನಾ ಸಂದರ್ಭದಲ್ಲಿ ಸುಳ್ಳು ಹೇಳಿ ನನ್ನ ಅನುಮತಿ ಇಲ್ಲದೇ ಸಭೆ ನಡೆಸಿದ್ದಾರೆ. ಆದರೆ ಅಂದು ನಾನು ಹೋಗಿರಲಿಲ್ಲ ಎಂದ ಅವರು, ನಮ್ಮ ಎಲ್ಲ ಕಾರ್ಯಭಾರಗಳು ಕಾನೂನು ಪ್ರಕಾರ ಇದೆ ಎಂದು ನ್ಯಾಯಾಲಯವೇ ಜಡ್ಜ್ ಮೆಂಟ್ ನೀಡಿದೆ. ಆ ಜಡ್ಜ್ ಮೆಂಟ್ ಬಂದ ಬಳಿಕವೇ ಅಕಾಡೆಮಿಯ ವಾರ್ಷಿಕ ಸಭೆ ಮಾಡಿದ್ದೇವೆ ಎಲ್ಲ ಕಾನೂನು ಬದ್ಧವಾಗಿ ಮಾಡಿದ್ದೇವೆ.ಎಂದು ಹೇಳಿದ್ದಾರೆ


 
ಸಿಬ್ಬಂದಿಗಳ ಹಾಗೂ ವಿದ್ಯಾರ್ಥಿಗಳ ಪೋಷಕರ ಯಾವುದೇ ರೀತಿಯ ಕುಂದು ಕೊರತೆಗಳನ್ನು ಹೋಗಲಾಡಿಸಲು ನಮ್ಮ ಆಡಳಿತ ಮಂಡಳಿ ಸಂಪೂರ್ಣ ಬದ್ಧ ಆಗಿದೆ. ರೇಣುಕಾಪ್ರಸಾದರ ಹೇಳಿಕೆಯಿಂದ ಯಾರೂ ಗೊಂದಲಗೊಳ್ಳುವ ಅವಶ್ಯಕತೆಯಿಲ್ಲ. ಮತ್ತು ಪ್ರತಿಭಟಿಸುವ ಅವಶ್ಯಕತೆಯೂ ಇಲ್ಲ.  ಡಿ.೨೩ರಿಂದ ವಿದ್ಯಾ ಸಂಸ್ಥೆಗಳ ಶೈಕ್ಷಣಿಕ ಚಟುವಟಿಕೆಗಳನ್ನು ಬಹಿಷ್ಕರಿಸಿ ಪ್ರತಿಭಟನೆ ನಡೆಸುವುದು ಕಾನೂನು ಬಾಹಿರ ಕೃತ್ಯವಾಗಿದ್ದು ಸಂಬಂಧಿತ ಸಿಬ್ಬಂದಿಗಳು ಆಡಳಿತ ಮಂಡಳಿಯ ಗಮನಕ್ಕೆ ತಾರದೇ ಶೈಕ್ಷಣಿಕ ಚಟುವಟಿಕೆಗಳನ್ನು ನಿರ್ವಹಿಸದೇ ವಿದ್ಯಾರ್ಥಿ ಹಾಗೂ ಸಿಬ್ಭಂದಿಗಳಿಗೇನಾದರೂ ತೊಂದರೆಯಾದಲ್ಲಿ ಪ್ರತಿಭಟನೆ ನಡೆಸುವ ಸಿಬ್ಬಂದಿಗಳನ್ನು ಸೂಕ್ತ ಕಾನೂನು ಕ್ರಮಕ್ಕೆ ಒಳಪಡಿಸಲು ಆಡಳಿತ ಮಂಡಳಿಯು ಹಿಂಜರಿಯುವುದಿಲ್ಲ ಎಂದು ಎಚ್ಚರಿಸಿದ್ದಾರೆ.


ಡಾ| ರೇಣುಕಾಪ್ರಸಾದರನ್ನು  ಪ್ರಧಾನ ಕಾರ್ಯದರ್ಶಿಯಿಂದ ತೆರವು ಮಾಡಲಾಗಿದೆ. ಹಾಗೂ ಡಾ| ಜ್ಯೋತಿ ಆರ್ ಪ್ರಸಾದ್ ಮತ್ತು ಡಾ| ಅಭಿಜ್ಞಾ ಪ್ರಸಾದ್‌ರವರು ಕೂಡಾ ಸಭೆಗೆ ಬಾರದೇ ಇರುವುದರಿಂದ ಅಕಾಡೆಮಿಯ ವಾರ್ಷಿಕ ಮಹಾಸಭೆಯ ನಿರ್ಣಯದಂತೆ ನಿರ್ದೇಶಕ ಸ್ಥಾನದಿಂದ ಕೈ ಬಿಡಲಾಗಿದ್ದು ಅವರಿಬ್ಬರೂ ಸದಸ್ಯರಾಗಿ ಮುಂದುವರಿಯಲಿದ್ದಾರೆ ಎಂದು ಡಾ. ಕೆ.ವಿ. ಚಿದಾನಂದರು ಹೇಳಿದರು.
ಅಕಾಡೆಮಿ ಕಾರ್ಯದರ್ಶಿ ಕೆ.ವಿ. ಹೇಮನಾಥರು ಮಾತನಾಡಿ, “೧೨.೫.೨೦೨ರಂದು ಅಕಾಡೆಮಿಯ ತುರ್ತು ಸಭೆ ನಡೆಸಬೇಕೆಂದು ರೇಣುಕಾಪ್ರಸಾದರು ನನ್ನ ಮನೆಗೆ ಬಂದು ಬಲವಂತ ಮಾಡಿದ್ದರು. ಆದರೆ ಅವರ ಉದ್ದೇಶ ಏನೆಂದು ನನಗೆ ಗೊತ್ತಿರಲಿಲ್ಲ. ಅವರು ಒತ್ತಾಯ ಮಾಡಿದ್ದರಿಂದ ಸಭೆಗೆ ಬಂದೆ. ಸಭೆಯಲ್ಲಿ ಅವರು, ಡಾ| ಜ್ಯೋತಿ ಪ್ರಸಾದ್, ಡಾ| ಅಭಿಜ್ಞಾ ಮತ್ತು ನಾನು ಇದ್ದೆವು. ಕೊರೊನಾ ಸಂದರ್ಭವಾಗಿರುವುದರಿಂದ ವೇತನ ಪಾವತಿಯ ವಿಚಾರ ಮುಂದಿಟ್ಟರು. ನಿರ್ಣಯಗಳನ್ನು ಬರೆಯದೇ ಖಾಲಿ ಪುಸ್ತಕಕ್ಕೆ ನನ್ನಿಂದ ಸಹಿ ಪಡೆದರು. ಬಳಿಕ ಅಜೆಂಡಾದಲ್ಲಿ ಇಲ್ಲದ ವಿಚಾರವನ್ನು ನಿರ್ಣಯದಲ್ಲಿ ಬರೆದಿದ್ದಾರೆ. ಇದೆಲ್ಲವೂ ನಮಗೆ ಗೊತ್ತಾಗಿ ಕಾನೂನು ಬಾಹಿರ ವ್ಯವಹಾರವನ್ನು ನಾವು ತಡೆದಿದ್ದೇವೆ ಎಂದು ಹೇಳಿದ ಅವರು, ಇಲ್ಲಿಯ ಎಲ್ಲ ವ್ಯವಹಾರ ನಾನೇ ನಡೆಸಬೇಕೆಂಬ ನಡವಳಿಕೆ ಅವರದು ಎಂದರು. ಅವರೇ ಮೊದಲು ಕೋರ್ಟ್ ಹೋದವರು . ನಮ್ಮ ವ್ಯವಹಾರಗಳು ನ್ಯಾಯ ಸಮ್ಮತವಾಗಿರುವುದರಿಂದ ನಮಗೆ ನ್ಯಾಯಾಲಯದಲ್ಲಿ ಜಯ ಸಿಕ್ಕಿದೆ ಎಂದು ಹೇಳಿದರು.

ಅಕಾಡೆಮಿ ಪ್ರಧಾನ ಕಾರ್ಯದರ್ಶಿ ಅಕ್ಷಯ್ ಕೆ.ಸಿ. ಮಾತನಾಡಿ, “ಅವರು ಹೇಳಿದ ವಿಚಾರಗಳೆಲ್ಲ ಸತ್ಯಕ್ಕೆ ದೂರವಾದುದು. ಯಾಕೆಂದರೆ ನಾವು ಸಂಸ್ಥೆಗಳನ್ನು ನಡೆಸುವ ಸಂದರ್ಭದಲ್ಲಿ ವಾರ್ಷಿಕ ಖರ್ಚು ವೆಚ್ಚಗಳನ್ನು ಮೊದಲೇ ಲೆಕ್ಕ  ಇಟ್ಟುಕೊಳ್ಳುತ್ತೇವೆ. ಕೊರೊನಾ ಸಂದರ್ಭದಲ್ಲಿ ಎಲ್ಲ ವಿದ್ಯಾಸಂಸ್ಥೆಗಳ ಸೀಟು ಫುಲ್ ಆಗಿತ್ತು. ಹಾಗಿದ್ದು ಹೀಗೆ ಹೇಳುತ್ತಾರೆಂದರೆ ಹೇಗೆ ಎಂದ ಅವರು, ಒಂದು ತಿಂಗಳ ಹಿಂದೆ ಬಂದು  ನನಗೆ  ಇಷ್ಟು ಕೋಟಿ ಕೊಡಬೇಕು ಎಂದರೆ ಹೇಗೆ? ಎಂದು ಕೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಅಕಾಡೆಮಿ ಆಫ್ ಲಿಬರಲ್ ಎಜ್ಯುಕೇಶನ್ ಉಪಾಧ್ಯಕ್ಷೆ ಶೋಭಾ ಚಿದಾನಂದ್, ನಿರ್ದೇಶಕರಾದ ಜಗದೀಶ್ ಅಡ್ತಲೆ, ಕಾನೂನು ಸಲಹೆಗಾರ ಪ್ರದೀಪ್ ಕೆ.ಎಲ್., ಧನಂಜಯ ಮದುವೆಗದ್ದೆ ಮೊದಲಾದವರಿದ್ದರು.

ರಾಜ್ಯ